ಪಿಎಸ್ಐ ಮರು ಪರೀಕ್ಷೆ: ಅಂಕಪಟ್ಟಿ ಪ್ರಕಟ

95

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಬಹುದೊಡ್ಡ ಹಗರಣ ಬೆಳಕಿಗೆ ಬಂದಿತ್ತು. ಹಿರಿಯ ಐಪಿಎಸ್ ಅಧಿಕಾರಿ ಸೇರಿದಂತೆ ಅನೇಕ ಪೊಲೀಸರು, ಸಿಬ್ಬಂದಿ, ಪರೀಕ್ಷಾರ್ಥಿಗಳು, ಅಕ್ರಮದ ಸೂತ್ರಧಾರಿಗಳ ಬಂಧನವಾಯಿತು.

ಕೋರ್ಟ್ ಮೆಟ್ಟಿಲು ಹತ್ತಿ ಬಂದ ಪ್ರಕರಣದಲ್ಲಿ ಮರು ಪರೀಕ್ಷೆಗೆ ಅವಕಾಶ ನೀಡಲಾಯಿತು. ಹೀಗಾಗಿ ಕಳೆದ ಜನವರಿ 23ರಂದು ಮರು ಪರೀಕ್ಷೆ ನಡೆಸಲಾಯಿತು. ಪತ್ರಿಕೆ 1 ಹಾಗೂ 2ರ ಅಂತಿಮ ಅಂಕ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!