ರಿಲೀಸ್ ಶುರುವಿನಲ್ಲೇ ‘ಪುರ್ ಸೋತ್ ರಾಮ’ನಿಗೆ ಸಂಕಟ

262

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ರವಿ ಶಂಕರ, ಕಾಮಿಡಿ ಕಾಲಾಡಿಗಳು ಖ್ಯಾತಿ ಶಿವರಾಜ ಕೆ.ಆರ್ ಪೇಟೆ ಸೇರಿದಂತೆ ಇತರರು ನಟಿಸಿರುವ ಪುರ್ ಸೋತ್ ರಾಮ ಚಿತ್ರ ಡಿಸೆಂಬರ್ 11ರಂದು ರಿಲೀಸ್ ಆಗಿದೆ. ಹೀಗೆ ಬಿಡುಗಡೆಯಾದ ಚಿತ್ರಕ್ಕೆ ಆರಂಭದಲ್ಲಿ ಸಂಕಟ ಶುರುವಾಗಿದೆ.

ಪುರ್ ಸೋತ್ ರಾಮ್ ಚಿತ್ರ ಬಿಡುಗಡೆಯಾಗಿ ನಾಲ್ಕೈದು ದಿನಗಳಲ್ಲಿಯೇ ಯಾರೋ ಪೈರಸಿ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ದೇ, ಟೆಲಿಗ್ರಾಮ್ ನಲ್ಲಿಯೂ ಹಂಚಿಕೊಳ್ಳಲಾಗಿದೆ. ಇದ್ರಿಂದಾಗಿ ಸಂಕಷ್ಟಕ್ಕೆ ತುತ್ತಾಗಿರುವ ನಿರ್ಮಾಪಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕರೋನಾ ಲಾಕ್ ಡೌನ್ ನಿಂದಾಗಿ ಚಿತ್ರ ಬಿಡುಗಡೆ ಮಾಡಲು ಆಗಿರ್ಲಿಲ್ಲ. ನಿಧಾನವಾಗಿ ಸಿನಿಮಾಗಳು ರಿಲೀಸ್ ಆಗ್ತಿವೆ. ಕಲಾವಿದರ, ನಿರ್ಮಾಪಕರು ಒಂದಿಷ್ಟು ಉಸಿರಾಡಬೇಕು ಎನ್ನುವಷ್ಟರಲ್ಲಿ ಪೈರಸಿ ಕಾಟ ಶುರುವಾಗಿದೆ. ಹೀಗಾಗಿ ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ನಿರ್ಮಾಪಕರು ಪ್ರಕರಣ ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!