ಕ್ಷಮೆ ಕೇಳಿದ ನಟಿ ರಚಿತಾ ರಾಮ್

225

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಏಕ್ ಲವ್ ಯೂ ಚಿತ್ರದ ಸಾಂಗ್ ರಿಲೀಸ್ ಕಾರ್ಯಕ್ರಮ ಶುಕ್ರವಾರ ಸಂಜೆ ಭರ್ಜರಿಯಾಗಿ ನಡೆದಿದೆ. ಕಾರ್ಯಕ್ರಮ ಆರಂಭಕ್ಕೂ ಮೊದಲು ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜಕುಮಾರಗೆ ಗೌರವ ಸಲ್ಲಿಸಲಾಗಿದೆ. ಆದರೆ, ಮುಂದುವರೆದ ಕಾರ್ಯಕ್ರಮದಲ್ಲಿ ಶಾಂಪೇನ್ ಓಪನ್ ಮಾಡಿ ಎಂಜಾಯ್ ಮಾಡಲಾಗಿದೆ.

ಅಪ್ಪು ಫೋಟೋ ಇಟ್ಟುಕೊಂಡು ಈ ರೀತಿಯಾಗಿ ಶಾಂಪೇನ್ ಓಪನ್ ಮಾಡಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಿರ್ದೇಶಕ ಪ್ರೇಮ್ ಕ್ಷಮೆ ಕೇಳಿದ್ದಾರೆ. ಇದೀಗ ಚಿತ್ರದ ನಟಿ ರಚಿತಾ ರಾಮ್ ಕ್ಷಮೆ ಕೇಳಿದ್ದಾರೆ.

ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇಲ್ಲ. ದಯವಿಟ್ಟು ಕ್ಷಮೆ ಇರಲಿ. ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆ ಎಂದು ನಂಬಿದ್ದೇನೆ ಅಂತಾ ಶನಿವಾರ ಇನ್ಸ್ಟಾಗ್ರಾಮ್ ದಲ್ಲಿ ನಟಿ ರಚಿತಾ ರಾಮ್ ಬರೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!