ಉಕ್ರೇನ್ ಮೇಲೆ ರಷ್ಯಾ ದಾಳಿ ಹಿಂದಿನ ಸಂಚು ಏನು?

509

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇದೀಗ ವಿಶ್ವದ ತುಂಬಾ ಚರ್ಚೆಯಲ್ಲಿರುವುದು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿರುವುದು. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿ ಅದನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ನೋಡುತ್ತಿದ್ದಾರೆ. ಇದರ ಹಿಂದಿನ ಸಂಚು ಏನು ಗೊತ್ತಾ?

ಉಕ್ರೇನ್ ಆಸೆಗೆ ರಷ್ಯಾ ಮುಳ್ಳಾಗಿದ್ಯಾಕೆ?

ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಾಗಲು ಬಯಸುತ್ತಿದೆ. ಇದನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿರುವ ರಷ್ಯಾ ಇದೀಗ ಯುದ್ಧ ಸಾರಿದೆ. ಒಂದು ವೇಳೆ ಉಕ್ರೇನ್ ನ್ಯಾಟೋ ಸದಸ್ಯ ರಾಷ್ಟ್ರವಾದರೆ ಗಡಿ ಭದ್ರತೆಗೆ ತೊಂದರೆ ಎಂದು ಕುಂಟು ನೆಪ ಹೇಳಿ ಇಷ್ಟೊಂದು ಸಾವು ನೋವಿಗೆ ಕಾರಣವಾಗುತ್ತಿದೆ. ಆದರೆ, ಎಸ್ಟೋನಿಯಾ, ಲಿಥುವೇನಿಯಾ, ಲಾಟ್ಟಿಯಾ ಸೇರಿ ದೇಶಗಳು ಸೋವಿಯತ್ ಒಕ್ಕೂಟದ ಭಾಗವಾಗಿದ್ದವು. ಮುಂದೆ ನ್ಯಾಟೋ ಸದಸ್ಯ ರಾಷ್ಟ್ರಗಳಾಗಿವೆ. ಇದರ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ತುಟಿ ಬಿಚ್ಚುವುದಿಲ್ಲ.

ಏನಿದು ನ್ಯಾಟೋ?

ಉತ್ತರ ಅಟಾಂಟ್ಲಿಕ್ ಒಕ್ಕೂಟ(Nato stands for the North Atlantic Treaty Organisation(NATO)) ಎಂದು ಕರೆಯುವುದು. ಈ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸ್ವಾತಂತ್ರ್ಯ, ಭದ್ರತೆ, ಸೌರ್ವಭೌಮತ್ವ ಕಾಪಾಡಿಕೊಂಡು ಹೋಗುವುದು. ಇದಕ್ಕಾಗಿ ರಾಜಕೀಯ ಹಾಗೂ ಸೇನಾ ಶಕ್ತಿಯನ್ನು ಸದುಪಯೋಗ ಪಡೆದುಕೊಳ್ಳುವುದಾಗಿದೆ. ಈ ಕಾರಣಕ್ಕೆ 1949ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಬೆಲ್ಜಿಯಂನ ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿಯಿದೆ.

ಪ್ರಸ್ತುತ 30 ರಾಷ್ಟ್ರಗಳು ನ್ಯಾಟೋ ಸದಸ್ಯರು

ನ್ಯಾಟೋದಲ್ಲಿ ಪ್ರಸ್ತುತ 30 ದೇಶಗಳು ಸದಸ್ಯತ್ವವನ್ನು ಪಡೆದುಕೊಂಡಿವೆ. ಇದರಲ್ಲಿ ಯುರೋಪ್ 27, ಉತ್ತರ ಅಮೆರಿಕದ 2 ಹಾಗೂ ಯುರೇಷಿಯಾದ 1 ದೇಶ ಸದಸ್ಯತ್ವ ಹೊಂದಿವೆ.

ಯುನೈಟೆಡ್ ಕಿಂಗ್‌ಡಮ್ (1949), ಯುನೈಟೆಡ್ ಸ್ಟೇಟ್ಸ್ (1949), ಪೋರ್ಚುಗಲ್ (1949), ನಾರ್ವೆ (1949), ಲಕ್ಸೆಂಬರ್ಗ್ (1949), ಐಸ್ಲ್ಯಾಂಡ್ (1949), ಇಟಲಿ (1949), ಡೆನ್ಮಾರ್ಕ್ (1949), ಫ್ರಾನ್ಸ್ (1949), ಕೆನಡಾ (1949), ಬೆಲ್ಜಿಯಂ (1949), ನೆದರ್ಲೆಂಡ್ಸ್1949), ಟರ್ಕಿ (1952), ಗ್ರೀಸ್ (1952), ಜರ್ಮನಿ (1955), ಸ್ಪೇನ್ (1982) ಜೆಕ್ ರಿಪಬ್ಲಿಕ್ (1999), ಪೋಲೆಂಡ್ (1999), ಹಂಗೇರಿ (1999), ರೊಮೇನಿಯಾ (2004), ಸ್ಲೋವಾಕಿಯಾ (2004), ಸ್ಲೊವೇನಿಯಾ (2004), ಬಲ್ಗೇರಿಯಾ (2004), ಎಸ್ಟೋನಿಯಾ (2004), ಲಾಟ್ವಿಯಾ (2004), ಲಿಥುವೇನಿಯಾ (2004) ಅಲ್ಬೇನಿಯಾ (2009), ಕ್ರೊಯೇಷಿಯಾ (2009), ಮಾಂಟೆನೆಗ್ರೊ (2017), ಉತ್ತರ ಮ್ಯಾಸಿಡೋನಿಯಾ (2020) ಹೀಗೆ 30 ರಾಷ್ಟ್ರಗಳು ನ್ಯಾಟೋ ಸದಸ್ಯತ್ವ ಪಡೆದುಕೊಂಡಿವೆ. ಈಗ ಉಕ್ರೇನ್ ಸದಸ್ಯತ್ವ ಪಡೆದುಕೊಳ್ಳಬೇಕು ಎಂದುಕೊಳ್ಳುತ್ತಿದೆ. ಇದಕ್ಕೆ ರಷ್ಯಾ ತಕರಾರು ತೆಗೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!