ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಪೊಲೀಸರು ಸೈಲೆಂಟ್ ಸುನಿಲ ಸೇರಿ ಸುಮಾರು 45 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ, ಜೆ.ಬಿ ನಾರಾಯಣ ಸೇರಿದಂತೆ 45ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಹಣ ಹಾಗೂ ಮಾರಕಾಸ್ತ್ರ ಪತ್ತೆಯಾಗಿದ್ದು ಅವುಗಳನ್ನ ವಶಕ್ಕೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಸಿಲಿಕಾನ್ ಸಿಟಿಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೂರಾರು ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ರು. ಕಮಿಷನರ್ ಕಮಲ್ ಪಂಥ್ ಅವರ ಆದೇಶದಂತೆ ರೌಡಿಗಳ ಮನೆಗಳ ಮೇಲೆ ನಿಗಾಯಿಟ್ಟು ದಾಳಿ ಮಾಡಲಾಗ್ತಿದೆ.