ಸಲ್ಲು ಸಾಲೆ, ಭಾಯ್ ಆಗಿದ್ದೇಗೆ?

371

ಬಾಲಿವುಡ್ ಅಂಗಳದಲ್ಲಿ ನಟ ಸಲ್ಮಾನ ಖಾನ ತನ್ನದೆಯಾದ ಹವಾ ಕ್ರಿಯೇಟ್ ಮಾಡಿದ ಸ್ಟಾರ್ ನಟ. ಹತ್ತು ಹಲವು ಸೂಪರ್ ಹಿಟ್ ಸಿನ್ಮಾಗಳನ್ನ ನೀಡಿದ ನಟ, ಸಲ್ಲು ಸಾಲೆಯಿಂದ ಸಲ್ಲು ಭಾಯ್ ಆಗಲು ನನ್ಗೆ 30 ವರ್ಷ ಬೇಕಾಯ್ತು ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 16ರಿಂದ 18ರ ವರೆಗೆ ಮೂರು ದಿನಗಳ ಕಾಲ ಮುಂಬೈನಲ್ಲಿ, ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿಯ 20ನೇ ಆವೃತ್ತಿಯ ಕಾರ್ಯಕ್ರಮ ನಡೆಯಲಿದೆ. ಇದರ ಪೂರ್ವಭಾವಿ ಕಾರ್ಯಕ್ರಮದಲ್ಲಿ ಮಾತ್ನಾಡಿದ ಸಲ್ಲು, 1989ರಲ್ಲಿ ನಾನು ನಟಿಸಿದ ಮೈನೆ ಪ್ಯಾರ್ ಕಿಯಾ ಸಿನ್ಮಾ ಹಿಟ್ ಆದ್ಮೇಲೆ ಜನರ ಮನಸ್ಸಿನಲ್ಲಿ ಸ್ಥಾನ ಪಡೆದೆ. ಅಂದಿನಿಂದ ಅದನ್ನು ಉಳಿಸಿಕೊಂಡು ಬಂದಿದ್ದೇನೆ ಅಂತಾ ಹೇಳಿದ್ದಾರೆ.

ಬಾಲಿವುಡ್ ದುನಿಯಾದಲ್ಲಿ 30 ವರ್ಷಗಳಿಂದ ಇದ್ದೇನೆ. ಇದಕ್ಕೆ ಜನರ ಪ್ರೀತಿ, ವಿಶ್ವಾಸ ಕಾರಣ. ಸಲ್ಲು ಸಾಲೆಯಿಂದ ಸಲ್ಲು ಭಾಯ್, ಭಾಯಿಜಾನ್ ಆಗಲು ಇಷ್ಟು ವರ್ಷ ಬೇಕಾಯ್ತು ಅಂತಾ ಹೇಳಿದ್ದಾರೆ. ಈ ವೇಳೆ ನಟಿಯರಾದ ಮಾಧುರಿ ದೀಕ್ಷಿತ ಹಾಗೂ ಕತ್ರೀನಾ ಕೈಫ ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!