ಬ್ರೇಕಿಂಗ್ ನ್ಯೂಸ್
Search

ಕರೋನಾದಿಂದ ಕಪಾಡಿ ಮೋದಿ ಜೀ ಎಂದು ಮಾಸ್ಕ್ ಮೇಲೆಯೇ ಬರಹ

339

ಕೊಲ್ಕೊತ್ತಾ: ಕರೋನಾ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿಕೊಂಡಿದೆ. ಹೀಗಾಗಿ ಎಲ್ಲರೂ ಮಾಸ್ಕ್ ಕಟ್ಟಿಕೊಂಡು ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿಯೂ ಕರೋನಾ ಭೀತಿ ಜೋರಾಗಿದೆ. ಹೀಗಾಗಿ ಮೆಟ್ರೋ ಪಾಲಿಟಿಯನ್ ಸಿಟಿಗಳಲ್ಲಿ ಮಾಸ್ಕ್ ಬಳಕೆ ಜೋರಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಾಸ್ಕ್ ಮೇಲೆ ಕರೋನಾದಿಂದ ಕಾಪಾಡಿ ಮೋದಿ ಜೀ ಎಂದು ಬರೆಯುವ ಮೂಲಕ, ಪ್ರಧಾನಿಗೆ ಮನವಿ ಮಾಡಿಕೊಳ್ಳಲಾಗ್ತಿದೆ. ಇದನ್ನ ಸ್ವತಃ ಸ್ಥಳೀಯ ಬಿಜೆಪಿ ನಾಯಕರೆ ಮಾಡಿಸಿದ್ದಾರೆ. Save from Corona virus infection Modi ji ಅನ್ನೋ ಸಾಲುಗಳನ್ನ ಮಾಸ್ಕ್ ಮೇಲೆ ಬಿಜೆಪಿ ನಾಯಕರು ಬರೆಸಿದ್ದು, ಇದನ್ನ ಜನರಿಗೆ ನೀಡ್ತಿದ್ದಾರೆ.

ಕರೋನಾ ಭೀತಿಯಿಂದ ಮಾಸ್ಕ್ ಬಳಕೆ ಹೆಚ್ಚಿದ್ದು, ಇದರ ರೇಟ್ ದುಪ್ಪಟ್ಟಾಗಿದೆ. 50-60 ರೂಪಾಯಿಗೆ ಮಾರಾಟವಾಗ್ತಿದ್ದ ಮಾಸ್ಕ್ ಇದೀಗ 100-150 ರೂಪಾಯಿಗೆ ಮಾರಾಟವಾಗ್ತಿದೆ. ಕೆಲವು ಇಡೆ ಮಾಸ್ಕ್ ಹ್ಯಾಂಡ್ ವಾಶ್ ಲಿಕ್ವಿಡ್ ಗಳು ಸಹ ಸಿಗ್ತಿಲ್ಲ.




Leave a Reply

Your email address will not be published. Required fields are marked *

error: Content is protected !!