15 ಲಕ್ಷ ಕದ್ದಿದ್ದ ಕಳ್ಳರು ಕೊನೆ ಕ್ಷಣದಲ್ಲಿ ಅಂದರ್ ಆಗಿದ್ದೇ ರೋಚಕ…

411

ಬೆಂಗಳೂರು: ಸಿನಿಮಾ ಸ್ಟೈಲ್ ನಲ್ಲಿ ಎಟಿಎಂ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಖದೀಮರು ಪೊಲೀಸ್ರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಿಸಿಟಿವಿ ಕ್ಯಾಮೆರಾಗೆ ಚೂಯಿಂಗಮ್ ಅಂಟಿಸಿ ಎಟಿಎಂ ಕಳ್ಳತನ ಮಾಡಲು ಮುಂದಾಗಿದ್ದ ಇಬ್ಬರು ಬ್ಯಾಟರಾಯನಪುರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ದೀಪಾಂಜಲಿನಗರದಲ್ಲಿರುವ ಎಸ್ ಬಿಐ ಎಟಿಎಂಗೆ ಭಾನುವಾರ ಮಧ್ಯರಾತ್ರಿ 1.30ರ ಸುಮಾರಿಗೆ ಎಂಟ್ರಿ ಕೊಟ್ಟ ಕಳ್ಳರು, ಗ್ಯಾಸ್ ಕಟರ್ ನಿಂದ ಮಿಷನ್ ಒಡೆದು 15 ಲಕ್ಷ ರೂಪಾಯಿಯನ್ನ ಬ್ಯಾಗ್ ಗೆ ತುಂಬಿಕೊಂಡಿದ್ದಾರೆ. ಇನ್ನೇನು ಅಲ್ಲಿಂದ ಎಸ್ಕೇಪ್ ಆಗಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ತಗ್ಲಹಾಕಿಕೊಂಡಿದ್ದಾರೆ.

ಎಟಿಎಂ ಹೊರಗೆಯಿದ್ದ 2 ಸಿಸಿಟಿವಿ ಕ್ಯಾಮೆರಾಗಳಿಗೆ ಚೂಯಿಂಗಮ್ ಅಂಟಿಸಿದ್ದಾರೆ. ಒಳಗಿನ ಕ್ಯಾಮೆರಾಗಳಿಗೆ ಬ್ಲಾಕ್ ಸ್ಪ್ರೇ ಹೊಡೆದಿದ್ದಾರೆ. ಇದು ಮುಂಬೈನಲ್ಲಿದ್ದ ಎಸ್ ಬಿಐ ಸಿಬ್ಬಂದಿ ಗಮನಕ್ಕೆ ಬಂದಿದೆ. ತಕ್ಷಣ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ತಕ್ಷಣ ಅಲರ್ಟ್ ಆದ ಪೊಲೀಸ್ರು ಸ್ಥಳಕ್ಕೆ ಬಂದಿದ್ದಾರೆ.

ಎಟಿಎಂ ಶೆಟರ್ ಲಾಕ್ ಮಾಡಿದ ಕಳ್ಳರು ಒಳಗೆ ಇರುವುದು ಪಕ್ಕಾ ಆಗಿದೆ. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿಕೊಂಡ ಕ್ರೈಂ ಬ್ರ್ಯಾಂಚ್ ಐದೇ ನಿಮಿಷದಲ್ಲಿ ಕಳ್ಳರನ್ನ ಬಂಧಿಸಿದೆ. ಕಳ್ಳರಿಂದ 100 ಕೆಜಿ ಗ್ಯಾಸ್ ಕಟರ್, ಸ್ಕ್ರೂ ಡ್ರೈವರ್, ಫಿನ್ಸಿಂಗ್ ಕಟರ್ ಸೇರಿದಂತೆ ಕಳ್ಳತನಕ್ಕೆ ಬಳಿಸಿದ್ದ ಕಾರ್ ಹಾಗೂ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಖದೀಮರು ಇದಕ್ಕೂ ಮೊದ್ಲು 4 ಕಡೆ ಎಟಿಎಂ ಕಳ್ಳತನ ಮಾಡಿದ್ರು. 5ನೇ ಬಾರಿಗೆ ಸಿಕ್ಕಿಬಿದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!