ಸೋಹಾ ಆಲಿಖಾನ್ ಪುತ್ರಿಯ ತೊದಲು ನುಡಿಯಲ್ಲಿ ಗಾಯತ್ರಿ ಮಂತ್ರ

382

ಬಾಲಿವುಡ್ ನಟ ಸೈಫ್ ಆಲಿಖಾನ್ ಸಹೋದರಿ ನಟಿ ಸೋಹಾ ಆಲಿಖಾನ್ ಹಾಗೂ ಕುನಾಲ್ ಕೆಮ್ಮು ಅವರ ಮಗಳು ಇನಿಯಾ ನೌಮಿ ಗಾಯತ್ರಿ ಮಂತ್ರ ಪಠಣೆ ಮಾಡಿದ್ದಾಳೆ. ಪುಟಾಣಿಯ ತೊದಲು ನಡಿಗಳಲ್ಲಿ ಬಂದಿರುವ ಗಾಯತ್ರಿ ಮಂತ್ರಕ್ಕೆ ನೆಟ್ಟಿಗರು ಬೋಲ್ಡ್ ಆಗಿದ್ದಾರೆ.

https://www.instagram.com/p/B4MGfplHZQI/?utm_source=ig_web_copy_link

ದೀಪಾವಳಿ ಟೈಂನಲ್ಲಿ ಉತ್ತರ ಭಾರತದಲ್ಲಿ ಭಾಯಿ ದೂಜ್ ವೇಳೆ ಕುನಾಲ್ ಸಹೋದರಿ ಆರತಿ ಮಾಡುವಾಗ ಗಾಯತ್ರಿ ಮಂತ್ರ ಪಠಣೆ ಮಾಡ್ತಾಳೆ. ಬಳಿಕ ಇನಿಯಾ ನೌಮಿಗೆ ಹೇಳಲು ಹೇಳಿದಾಗ, ಆಕೆ ತಕ್ಷಣ ಹೇಳಲು ಶುರು ಮಾಡ್ತಾಳೆ. ಇದು ಎಲ್ಲರ ಮೆಚ್ಚುಗೆ ಪಡೆದಿದೆ.

ಆಯುಧ ಪೂಜೆಯ ದಿನ ಹುಟ್ಟಿದ ಮಗಳಿಗೆ ವಿಶೇಷವಾಗಿ ಇನಿಯಾ ನೌಮಿ ಕೆಮ್ಮು ಎಂದು ನಾಮಕರಣ ಮಾಡಿದ್ದಾರೆ. ನಟ ಸೈಫ್ ಆಲಿಖಾನ್ ಸಹೋದರಿ ನಟಿ ಸೋಹಾ ಆಲಿಖಾನ್ ಹಾಗೂ ಕುನಾಲ್ 2015ರಲ್ಲಿ ಪ್ರೇಮ ವಿವಾಹ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!