3 ದಶಕಗಳ ಹೋರಾಟಕ್ಕೆ ಇದೀಗ ಪ್ರತಿಫಲ: ತಳವಾರ, ಪರಿವಾರ, ಸಿದ್ದಿಗೆ ಎಸ್ಟಿ ಮಾನ್ಯತೆ

622

ನವದೆಹಲಿ: ಕಳೆದ ಮೂರು ದಶಕಗಳಿಂದ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ(ಎಸ್ಟಿ) ಸೇರಿಸಬೇಕೆಂದು ರಾಜ್ಯದ ತುಂಬಾ ಇರುವ ತಳವಾರ, ಪರಿವಾರ, ಸಿದ್ದಿ ಸಮುದಾಯದವರು ಮಾಡಿಕೊಂಡು ಬಂದಿರುವ ನ್ಯಾಯಯುತ ಹೋರಾಟಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ತಳವಾರ, ಪರಿವಾರ, ಸಿದ್ದಿ ಸಮುದಾಯಗಳಿಗೆ ಎಸ್ಟಿ ಮಾನ್ಯತೆ ನೀಡುವ ಮಸೂದೆಯನ್ನ ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಗಿದೆ. ಬುಡಕಟ್ಟು ವ್ಯವಹಾರ ಸಚಿವ ಅರ್ಜುನ ಮುಂಡಾ ಮಸೂದೆ ಮಂಡಿಸಿದ್ರು.

ಕೇಂದ್ರ ಸಚಿವ ಅರ್ಜುನ ಮುಂಡಾ

ರಾಜ್ಯಸಭೆಯಲ್ಲಿ ಈ ಹಿಂದೆಯೇ ಮಸೂದೆ ಪಾಸಾಗಿತ್ತು. ಇದೀಗ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಇದೀಗ ರಾಷ್ಟ್ರಪತಿಗಳ ಸಹಿ ಒಂದು ಬಾಕಿ ಉಳಿದಿದೆ. ಇದೊಂದು ಕೆಲಸವಾಗ್ತಿದ್ದಂತೆ, ತಿದ್ದುಪಡಿ ಜಾರಿಗೆ ಬರಲಿದೆ. ಕಳೆದ 30 ವರ್ಷಗಳಿಂದ ಈ ಸಮುದಾದಯದ ಜನರು ಮಾಡ್ತಿರುವ ಹೋರಾಟಕ್ಕೆ ಜಯ ಸಿಕ್ಕಂತಾಗುತ್ತೆ.

ಎಸ್ಟಿ ಸ್ಥಾನಮಾನ ಸಿಗ್ತದ್ದಂತೆ ಎಲ್ಲ ಪರಿಶಿಷ್ಟ ಪಂಗಡಗಳು ಪಡೆಯುತ್ತಿರುವ ಮೀಸಲು ಸೌಲಭ್ಯಗಳು ತಳವಾರ, ಪರಿವಾರ ಹಾಗೂ ಸಿದ್ದಿ ಸಮುದಾಯಕ್ಕೆ ಸಿಗಲಿವೆ. ತಳವಾರ ಹಾಗೂ ಪರಿವಾರ ಸಮುದಾಯದವರು ಉತ್ತರ ಕರ್ನಾಟಕ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಭಾಗಗಳಲ್ಲಿ ಹೆಚ್ಚಾಗಿದ್ದಾರೆ. ಸಿದ್ದಿ ಸಮುದಾಯ ಬೆಳಗಾವಿ ಹಾಗೂ ಧಾರವಾಡ ಭಾಗದಲ್ಲಿ ಹೆಚ್ಚಿದೆ. ಇನ್ಮುಂದೆ ಇವರಿಗೆ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಅನುಕೂಲವಾಗಲಿದೆ.

ಈ ಬಗ್ಗೆ ಮಾತ್ನಾಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ, ಈ ಮೂರು ಸಮುದಾಯಗಳಿಗೆ ಎಸ್ಟಿ ಮೀಸಲಾಯ್ತಿ ನೀಡಲು ಸಹಕರಿಸಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ ಶಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹಾಗೂ ಸಿಎಂ ಬಿಎಸ್ವೈಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!