ಕೊಪ್ಪಳದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ

171

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಜಿಲ್ಲೆಯ ಕುಕನೂರು ಹೋಬಳಿಯ ಮನ್ನಾಪುರ ಗ್ರಾಮದಲ್ಲಿ, ಕೃಷಿ ಅಧಿಕಾರಿ ಬಸವರಾಜ ತೇರಿನ ಅವರ ನೇತೃತ್ವದಲ್ಲಿ ತೊಗರಿ ಬಳೆ ಕ್ಷೇತ್ರೋತ್ಸವ ಕಳೆದ ಮಂಗಳವಾರ ನಡೆಸಲಾಯಿತು.

ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಕೃಷಿ ತಂತ್ರಜ್ಞ ಸಂಗನಗೌಡರ್ ಆದಾಪುರ ಅವರು ಸಂಪನ್ಮೂಲ ವ್ಯಕ್ತಿಯಾಗಿ ರೈತರಿಗೆ ಸಮಗ್ರ ಮಾಹಿತಿ ನೀಡಿದರು. ಎನ್.ಎಫ್.ಎಸ್.ಎಮ್ ಯೋಜನೆಯ ತಾಂತ್ರಿಕ ಸಹಾಯಕರು ತೊಗರಿ ಬೆಳೆಯ ತಾಂತ್ರಿಕ ಮಾಹಿತಿ ನೀಡಿದರು. ಪ್ರಗತಿಪರ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಆತ್ಮಾ ಯೋಜನೆಯ ತರಬೇತಿ ನೀಡಿ, ರೈತರಿಗೆ ಬೀಜೋಪಚಾರದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.

ರೈತರೊಂದಿಗೆ ಕ್ಷೇತ್ರ ಭೇಟಿ ಮಾಡಿ ಕಡಲೆ, ತೊಗರಿ, ಸಿರಿಧಾನ್ಯಗಳಾದ ಊದಲು, ಸಜ್ಜೆ, ಬಿಳಿಜೋಳದ ಬೆಳೆಗಳ ಸಸ್ಯ ಸಂರಕ್ಷಣೆ ಮತ್ತು ಮೌಲ್ಯ ವರ್ಧನೆ ಮಾಹಿತಿ ನೀಡಲಾಯಿತು.
Leave a Reply

Your email address will not be published. Required fields are marked *

error: Content is protected !!