ನಕಲಿ ಚಿನ್ನ.. ಅಸಲಿ ಕಳ್ಳರು ಅಂದರ್

273

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಅಸಲಿ ಚಿನ್ನದ ಸರ ಎಂದು ಕಳ್ಳತನ ಮಾಡಿದ ನಕಲಿ ಚಿನ್ನದ ಸರದಿಂದ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಮೈಕೋಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇನ್ನು ಕಳ್ಳರು ಚಿನ್ನದ ಸರದ ಬದಲು ರೋಲ್ಡ್ ಗೋಲ್ಡ್ ಕದ್ದು ಸಿಕ್ಕಿ ಬಿದ್ದಿದ್ದಾರೆ.‌

ಸಂತೋಷ ಮತ್ತು ಜೈಕುಮಾರ ಅನ್ನೋ ಕಳ್ಳರು ಸರ ಮಾರಲು ಹೋದಾಗ ಸಿಕ್ಕಿಬಿದ್ದಿದ್ದಾರೆ. ಕದ್ದ ಸರವನ್ನು ಚಿನ್ನದಂಗಡಿಗೆ ತೆಗೆದುಕೊಂಡು ಹೋದಾಗ ಅದು ಚಿನ್ನದ ಸರವಲ್ಲ. ರೋಲ್ಡ್ ಗೋಲ್ಡ್ ಅನ್ನೋದು ಪತ್ತೆಯಾಗಿದೆ. ಆಗ ಚಿನ್ನದಂಗಡಿಯವ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಇನ್ನು ಪೊಲೀಸರು ಸಿಸಿಟಿವಿ ಆಧಾರದಲ್ಲಿ ಸರಗಳ್ಳರಾದ ಸಂತೋಷ ಮತ್ತು ಜೈಕುಮಾರ ಅರೆಸ್ಟ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!