ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ

414

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಪಿಯು ಬೋರ್ಟ್ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತು ಸುಮಾರು 128 ಪುಟಗಳ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯಾ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಮಂಡಳಿ, ಸಿಡಿಸಿ ನಿಗದಿ ಮಾಡುವ ಸಮವಸ್ತ್ರ ಧರಿಸಬೇಕೆಂದು ತಿಳಿಸಲಾಗಿದೆ. ಸಮಾನತೆ, ಐಕ್ಯತೆ ಭಂಗ ಬರದಂತೆ ಇರುವ ವಸ್ತಗಳನ್ನು ಧರಿಸುವಂತೆ ತಿಳಿಸಲಾಗಿದೆ.

ಇನ್ನು ಪಿಯುಸಿ ಪಠ್ಯಕ್ರಮ ಬೋಧನೆ ಹೊರತು ಪಡಿಸಿ ಸ್ಪರ್ಧಾತ್ಮಕ ವಿಷಯಗಳ ತರಬೇತಿ ನೀಡುವುದು ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.  ಸಿಇಟಿ, ಎಐಇಇಇ, ಐಐಟಿ, ಜೆಇಇ, ನೀಟ್, ಇಂಟರ್ಗ್ರೇಟೆಡ್ ಕೋರ್ಸ್, ಬ್ರಿಡ್ಜ್ ಕೋರ್ಸ್ ಇತ್ಯಾದಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದು ಕ್ಲಾಸ್ ನಡೆಸಿದರೆ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಬೇಕಾಗುತ್ತೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!