ಹೆರಿಗೆ ವೇಳೆ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಟೊರಿ ನಿಧನ

179

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಲಾಸ್ ಏಂಜಲಸ್: ಹೆರಿಗೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಉಸಿರಾಟದ ಸಮಸ್ಯೆಯಾಗಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಓಟಗಾರ್ತಿ ಟೊರಿ ಬೌವಿ(32) ನಿಧನರಾಗಿದ್ದಾರೆ. ಹೆರಿಗೆ ವೇಳೆ ಕೋಮಾಗೆ ಹೋಗಿ ರಕ್ತದೊತ್ತಡ ಆಗಿ ಪ್ರಾಣ ಬಿಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಎಂಟು ತಿಂಗಳು ಗರ್ಭಿಣಿಯಾಗಿದ್ದ ಟೊರಿ ಫ್ಲೋರಿಡಾದ ಆರೇಂಜ್ ಕೌಂಟಿಯಲ್ಲಿ ಒಬ್ಬರೆ ವಾಸವಾಗಿದ್ದರು. ಹೆರಿಗೆ ನೋವು ಕಾಣಿಸಿಕೊಂಡಾಗ ಕುಸಿದು ಬಿದ್ದಿದ್ದಾರೆ. ಅಧಿಕ ರಕ್ತದೊತ್ತಡ ಸಾವಿಗೆ ಕಾರಣ ಎಂದು ವೈದ್ಯರು ಮರಣೋತ್ತರ ಪರೀಕ್ಷೆ ವೇಳೆ ತಿಳಿಸಿದ್ದಾರೆ.

2016ರ ರಿಯೋ ಒಲಿಂಪಿಕ್ ನಲ್ಲಿ4×100 ಮೀಟರ್ ರಿಲೇ ವಿಭಾಗದಲ್ಲಿ ಚಿನ್ನ, 100 ಮೀಟರ್ ಓಟದಲ್ಲಿ ಬೆಳ್ಳಿ, 200 ಮೀಟರ್ ಓಟದಲ್ಲಿ ಕಂಚು ಪದಕ ಜಯಸಿದ್ದರು. ಟೊರಿ ನಿಧನಕ್ಕೆ ಅಮೆರಿಕಾದ ಕ್ರೀಡಾ ದಿಗ್ಗಜರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!