ನಮ್ಮನ್ನು ಮಧ್ಯರಾತ್ರಿ ಕರೆಯಬಹುದಿತ್ತು…

133

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಸಂಸದ ಹಾಗೂ ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪ ಸಂಬಂಧ, ಬಿಜೆಪಿ ಮಹಿಳಾ ಕಾರ್ಯಕರ್ತರು ಮಾತನಾಡಿದ್ದಾರೆ. ತಮ್ಮ ಸಂಸದರನ್ನು ಸಮರ್ಥಿಸುವ ಭರದಲ್ಲಿ ಎಷ್ಟೊಂದು ಕೀಳಾಗಿ ಮಾತನಾಡಿದ್ದಾರೆ ಅಂದರೆ, ಮಹಿಳಾ ಕುಸ್ತಿಪಟುಗಳಿಗಿಂತ ನಾವೇನು ಕಡಿಮೆ ಇದ್ದೇವೆ ನೀವೆ ಹೇಳಿ. ನಮ್ಮನ್ನು ಸಹ ಮಧ್ಯರಾತ್ರಿ ಕರೆಯಬಹುದಿತ್ತು ಅಲ್ವಾ ಎಂದಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಾವು ಸಾಮಾನ್ಯ ಮಹಿಳೆಯರು. ಅವರ ವಿರುದ್ಧ ಹೋರಾಡಲು ನಮ್ಮ ಹತ್ತಿರ ಯಾವುದೇ ಶಕ್ತಿ ಇಲ್ಲ ಅಂತಾ ಹೇಳಿದ್ದಾರೆ. ಇನ್ನೋರ್ವ ಕಾರ್ಯಕರ್ತ ಮಾತನಾಡಿ, ಮಹಿಳಾ ಕುಸ್ತಿಪಟುಗಳ ಮುಖ ನೋಡಿದ್ದೀರಾ ಹೇಗೆದೆ? ಇಲ್ಲಿ ಒಬ್ಬರಿಗಿಂತ ಒಬ್ಬರು ಸುಂದರಿಯರಿದ್ದಾರೆ. ನಮ್ಮ ಸಂಸದರಿಗೇನು ಸುಂದರ ಮಹಿಳೆಯರ ಕೊರತೆ ಇದೆಯಾ ಅಂತಾ ಪ್ರಶ್ನಿಸುವ ಮೂಲಕ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!