ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅನ್ನೋದು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ವೆ?

417

ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಅವರು ಮಾತು ಇದೀಗ ವಿವಾದ ಹುಟ್ಟು ಹಾಕಿದೆ. ಬಿಜೆಪಿಯನ್ನ ಸಂಘಟಿಸುವ ದೃಷ್ಟಿಯಿಂದ ರಾಜ್ಯಾಧ್ಯಂತ ಪ್ರವಾಸ ಮಾಡ್ತಿರುವ ನಳೀನಕುಮಾರ ಕಟೀಲ, ರಾಜ್ಯದಲ್ಲಿರುವ ಜಿಲ್ಲೆಗಳ ಬಗ್ಗೆ ಮಾತ್ನಾಡತಾ 32, 34 ಜಿಲ್ಲೆಗಳೆಂದು ಹೇಳಿದ್ದಾರೆ.

ಬೆಳಗ್ಗೆ 32 ಜಿಲ್ಲೆಗಳು ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷರು, ಮಧ್ಯಾಹ್ನ 34 ಅಂತಾ ಹೇಳುವ ಮೂಲಕ ಇದೀಗ ಪೇಚೆಗೆ ಸಿಲುಕಿದ್ದಾರೆ. ಇದರ ಬಗ್ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅನ್ನೋ ಕನಿಷ್ಠ ಜ್ಞಾನವೂ ಇಲ್ಲದ ನೀವು ರಾಜ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವಿರಿ ಬಿಜೆಪಿ ಕರ್ನಾಟಕದ ಅಧ್ಯಕ್ಷರಾಗಿರುವಿರಿ ಅನ್ನೋ ಮಾತುಗಳ ಮೂಲಕ ಭರ್ಜರಿ ಚಾಟಿ ಬೀಸಿದೆ.




Leave a Reply

Your email address will not be published. Required fields are marked *

error: Content is protected !!