ವೃಕ್ಷಥಾನ್-2023: ಪ್ರಥಮ ಸ್ಥಾನ ಪಡೆದ ಗಂಗವ್ವ ಬೆಳಗಾವಿ

212

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಗರದಲ್ಲಿ ಡಿಸೆಂಬರ್ 24 ಭಾನುವಾರ ಮುಂಜಾನೆ ನಡೆದ ವಕ್ಷಥಾನ್ ಹರಿಟೇಜ್ ರನ್-2023 ಭರ್ಜರಿಯಾಗಿ ನಡೆಯಿತು. ಇದರಲ್ಲಿ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ಬರೋಬ್ಬರಿ 10 ಸಾವಿರ ಓಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಅದೇ ರೀತಿ ಗಂಗವ್ವ ಮಲ್ಲೇಶಪ್ಪ ಬೆಳಗಾವಿ ಎನ್ನುವ 68 ವರ್ಷದ ವೃದ್ಧೆ ಸಹ ಭಾಗವಹಿಸಿದ್ದರು. 34 ನಿಮಿಷದಲ್ಲಿ 5 ಕಿಲೋ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.

ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದವರಾಗಿದ್ದಾರೆ. ಗಂಗವ್ವ ಅವರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಹಲವಾರು ಮ್ಯಾರಾಥಾನ್ ಗಳಲ್ಲಿ ಸ್ಪರ್ಧಿಸಿ ಬಹುಮಾನ ಗಳಿಸಿದ್ದಾರೆ. ಸಚಿವ ಎಂ.ಬಿ ಪಾಟೀಲ, ಪ್ರಥಮ ಸ್ಥಾನ ಪಡೆದ ಗಂಗವ್ವ ಅವರಿಗೆ ಬಹುಮಾನ ವಿತರಣೆ ಮಾಡಿದರು.




Leave a Reply

Your email address will not be published. Required fields are marked *

error: Content is protected !!