ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು?

338

ಪ್ರಜಾಸ್ತ್ರ ಸುದ್ದಿ

ಈಗಾಗ್ಲೇ ಕರೋನಾದಿಂದಾಗಿ ಜನರು ಹೈರಾಣಾಗಿದ್ದಾರೆ. ಹೀಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಪಡ್ತಿದ್ದಾರೆ. ಊಟ ಉಪಚಾರ, ವ್ಯಾಯಾಮ ಸೇರಿದಂತೆ ಕಟ್ಟುನಿಟ್ಟಾಗಿ ಒಂದಿಷ್ಟು ಪಾಲನೆ ಮಾಡ್ತಿದ್ದಾರೆ. ಈಗ ಚಳಿಗಾಲ ಬೇರೆ ಇರುವುದ್ರಿಂದ ಇಂತಹ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯನ್ನ ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂದರೆ, ಬಾದಾಮಿ, ಶುಂಠಿ, ವಿಟಮಿನ್ ಸಿ ಇರುವಂತಹ ನಿಂಬೆ, ಕಿತ್ತಳೆ, ಕಿವಿ ಹಣ್ಣ ಸೇವನೆ ಮಾಡಬೇಕು.

ಬಾದಾಮಿಯಲ್ಲಿ ಸತು, ವಿಟಮಿನ್ ಇ, ಪ್ರೋಟೀನ್, ಮ್ಯಾಗ್ನೇಶಿಯಂ ಇರುವುದ್ರಿಂದ ಬ್ಯಾಕ್ಟೇರಿಯ, ವೈರಸ್ ಸೋಂಕಿನಿಂದ ತಡಗಟ್ಟುತ್ತದೆ. ಇನ್ನು ಕಿತ್ತಳೆ, ನಿಂಬೆ, ಕಿವಿ ಹಣ್ಣ ಸೇವನೆ ಮಾಡುವುದ್ರಿಂದ ವಿಟಮಿನ್ ಸಿ ಸಿಗುತ್ತೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಾಗುವ ಜೊತೆಗೆ ನೆಗಡಿ ಬರದಂತೆ ತಡೆಯುತ್ತೆ.

ಇನ್ನು ಶುಂಠಿಯ ಚಹಾವನ್ನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದು ಆ್ಯಂಟಿ ಬ್ಯಾಕ್ಟೇರಿಯಾ ಗುಣಗಳನ್ನ ಹೊಂದಿದೆ. ಇದ್ರಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ. ಹೀಗೆ ಚಳಿಗಾಲದಲ್ಲಿ ಇವುಗಳನ್ನ ಸರಿಯಾದ ಸಮಯಕ್ಕೆ ಸೇವನೆ ಮಾಡುತ್ತಾ ಬರುವುದ್ರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು.  




Leave a Reply

Your email address will not be published. Required fields are marked *

error: Content is protected !!