ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ

302

ನವದೆಹಲಿ: ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ ಶುರುವಾಗಲಿದೆ. ಡಿಸೆಂಬರ್ 13ರ ವರೆಗೂ ಅಧಿವೇಶನ ನಡೆಯಲಿದೆ. ಈ ವೇಳೆ ಆರ್ಥಿಕ ಕುಸಿತ, ಕಾಶ್ಮೀರ ಪರಿಸ್ಥಿತಿ, ಸಂಸದ ಫಾರೂಖ ಅಬ್ದುಲ್ಲಾ ಗೃಹ ಬಂಧನ ವಿಚಾರ, ನಿರುದ್ಯೋಗ, ಬೆಲೆ ಏರಿಕೆ, ದೆಹಲಿ ವಾಯುಮಾಲಿನ್ಯ ಸೇರಿದಂತೆ ಹಲವು ವಿಚಾರಗಳನ್ನ ಇಟ್ಟುಕೊಂಡು ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ರೆಡಿಯಾಗಿವೆ.

ಇದರ ಜೊತೆಗೆ ಕಾರ್ಪೂರೇಟ್ ತೆರಿಗೆ ಕಡಿತ, ಇ-ಸಿಗರೇಟ್ ನಿಷೇಧ ಸೇರಿದಂತೆ ಹಲವು ವಿಷಯಗಳಲ್ಲಿ ವಿರೋಧ ಪಕ್ಷಗಳ ಗದ್ದಲ ಗಲಾಟೆ ನಡುವೆಯೂ ಮಸೂದೆಗಳನ್ನ ಮಂಡಿಸಿ ಸರ್ಕಾರದಿಂದ ಅನುಮೋದನೆ ಪಡೆದಿರುವುದನ್ನ ತೀವ್ರವಾಗಿ ಖಂಡಿಸಲು ಸಿದ್ಧರಾಗಿದ್ದಾರೆ.

ಪೌರತ್ವ ವಿದೇಯಕ ತಿದ್ದುಪಡಿ, ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ, ದಿವಾಳಿತನ ತಿದ್ದುಪಡಿ, ಬಹುರಾಜ್ಯ ಸಹಕಾರ ಸಂಘಗಳ ತಿದ್ದುಪಡಿ ಸೇರಿದಂತೆ 35 ಪ್ರಮುಖ ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಯಾವೆಲ್ಲ ವಿಘ್ನಗಳು ಎದುರಾಗುತ್ತವೆ. ಈ ಮಸೂದೆಗಳು ಎಷ್ಟೊಂದು ಜನ ವಿರೋಧಿ ಅನ್ನೋದು ವಿರೋಧ ಪಕ್ಷಗಳು ಬಲವಾಗಿ ಸಾಬೀತು ಪಡೆಸುವ ಮೂಲಕ ಅವುಗಳಿಗೆ ಬ್ರೇಕ್ ಹಾಕುವ ಕೆಲಸಕ್ಕೆ ಮುಂದಾಗಿವೆ.




Leave a Reply

Your email address will not be published. Required fields are marked *

error: Content is protected !!