ತಮಿಳುನಾಡಿನಲ್ಲಿ ಇನ್ಮುಂದೆ ಮಹಿಳಾ ಅರ್ಚಕರು

248

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರು ದೇವಾಲಯದ ಅರ್ಚಕರಾಗುವ ಮೂಲಕ ಹೊಸತನಕ್ಕೆ ನಾಂದಿ ಹಾಡುತ್ತಿದೆ. ಈ ಕುರಿತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಿಳೆಯರು ಪೈಲೆಟ್, ಗಗನಯಾತ್ರೆಯಲ್ಲಿ ಸಾಧನೆ ಮಾಡಿದರೂ ದೇವಾಲಯಗಳಲ್ಲಿ ಅರ್ಚಕ ವೃತ್ತಿ ಮಾಡುವುದನ್ನು ಅಶುದ್ಧ ಎಂದು ಹೇಳಲಾಗುತ್ತಿತ್ತು. ಇಂತಹ ವ್ಯವಸ್ಥೆಗೆ ಕೊನೆಗೂ ಬದಲಾವಣೆ ಬಂದಿದೆ. ಎಲ್ಲ ಜಾತಿ ಜನರನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸಿ ದ್ರಾವಿಡ್ ಮಾದರಿಯ ಸರ್ಕಾರ ಪರಿಯಾರ್ ಅವರ ಹೃದಯದ ಮುಳ್ಳು ತೆಗೆದಿದ್ದೇವೆ ಎಂದಿದ್ದಾರೆ.

ತಿರುಚಿರಪಲ್ಲಿಯ ಶ್ರೀರಂಗನಾಥರ ದೇವಾಲಯದಲ್ಲಿ ಅರ್ಚಕ ವೃತ್ತಿಯ ಕುರಿತು ವಿವಿಧ ಜಾತಿಯ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಇದೀಗ ದೇವಾಲಯಗಳಲ್ಲಿ ಅವರು ಸೇವೆ ಸಲ್ಲಿಸಲಿದ್ದಾರೆ. ಬೇರೆ ಜಾತಿಯವರನ್ನು, ಮಹಿಳೆಯರನ್ನು ಪೂಜೆ ಮಾಡಲು ಬಿಡದೆ ಇರುವುದು ಹೃದಯಕ್ಕೆ ಮುಳ್ಳು ಚುಚ್ಚಿದಂತೆ ಎಂದು ಸಮಾಜ ಸುಧಾರಣೆಯ ನಾಯಕ ಇ.ವಿ ಪೆರಿಯಾರ್ ಹೇಳಿದ್ದರು.




Leave a Reply

Your email address will not be published. Required fields are marked *

error: Content is protected !!