ಚಂದನವನಕ್ಕೂ ಕರೋನಾ ಭಯ

388

ಪವರ್ ಸ್ಟಾರ್ ಪುನೀತರಾಜಕುಮಾರ ನಟನೆಯ ಬಹುನಿರೀಕ್ಷಿತ ಯುವರತ್ನ ಚಿತ್ರದ ಸಾಂಗ್ ಶೂಟಿಂಗ್ ವೊಂದಕ್ಕೆ ಯೂರೋಪ್ ಗೆ ಹೋಗಬೇಕಿತ್ತು. ಮಾರ್ಚ್ 7ರ ತನಕ ಅಲ್ಲಿ ಶೂಟಿಂಗ್ ನಡೆಯಬೇಕಿತ್ತು. ಇದಕ್ಕಾಗಿ ಎಲ್ಲವನ್ನೂ ಬುಕ್ ಮಾಡಲಾಗಿತ್ತು. ಬಟ್ ಲಾಸ್ಟ್ ಟೈಂನಲ್ಲಿ ಕ್ಯಾನ್ಸ್ ಆಗಿದೆ. ಕಾರಣ ಕರೋನಾ ಎಫೆಕ್ಟ್.

ಯುರೋಪ್ ನ ಸ್ಲೋವೇನಿಯಾಗೆ ಹೋಗಲು ಟಿಕೆಟ್, ಹೋಟೆಲ್ ಸೇರಿದಂತೆ ಎಲ್ಲವನ್ನೂ ಬುಕ್ ಮಾಡಲಾಗಿತ್ತು. ಆದ್ರೆ, ಕರೋನಾ ವೈರಸ್ ಎಲ್ಲ ಕಡೆ ತನ್ನ ಆರ್ಭಟ ಮುಂದುವರೆಸಿದೆ. ಹೀಗಾಗಿ 15 ರಿಂದ 20 ಲಕ್ಷ ರೂಪಾಯಿ ಲಾಸ್ ಆದ್ರೂ ಪರವಾಗಿಲ್ಲ. ಹೋಗೋದು ಬೇಡವೆಂದು ಚಿತ್ರ ತಂಡ ಪ್ರಯಾಣವನ್ನ ಕ್ಯಾನ್ಸಲ್ ಮಾಡಿದೆ.

ಚೀನಾದಿಂದ ಶುರುವಾದ ಕರೋನಾ ವೈರಸ್ ಮಹಾಮಾರಿ ಇಂದು ವಿಶ್ವದಾದ್ಯಂತ ಹರಡಿಕೊಂಡಿದ್ದು, ಅನೇಕ ಉದ್ಯಮದ ಮೇಲೆ ಎಫೆಕ್ಟ್ ಆಗಿದೆ. ಹೀಗಾಗಿ ಈಗಾಗ್ಲೇ 3 ಸಾವಿರ ಜನ ಸಾವನ್ನಪ್ಪಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಉದ್ಯಮದ ಮೇಲೂ ಎಫೆಕ್ಟ್ ಆಗಿದೆ.




Leave a Reply

Your email address will not be published. Required fields are marked *

error: Content is protected !!