ಬ್ರೇಕಿಂಗ್ ನ್ಯೂಸ್
Search

14 ವರ್ಷದ ಈ ಬಾಲಕಿ ಎತ್ತರ ಬರೋಬ್ಬರಿ 7.4 ಅಡಿ ಎತ್ತರ

679

ಪ್ರಜಾಸ್ತ್ರ ಲೈಫ್ ಸ್ಟೈಲ್

ದೈಹಿಕವಾಗಿ ಎತ್ತರವಾಗಲು ಅನೇಕರು ಸಾಕಷ್ಟು ಕಷ್ಟ ಪಡ್ತಾರೆ. ಇನ್ನು ಕೆಲವರು ಸಾಮಾನ್ಯ ಬೆಳವಣಿಗೆಗಿಂತ ಅತಿ ಹೆಚ್ಚು ಎತ್ತರವಾಗಿ ಬೆಳೆದು ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಾರೆ. ಅಂತವರ ಸಾಲಿನಲ್ಲಿ ಈ 14 ವರ್ಷದ ಬಾಲಕಿ ಕೂಡಾ ಒಬ್ಬಳು.

ಚೀನಾದ ಜಿಂಗ್ ಗ್ಜೋದಲ್ಲಿ ನಡೆದ ಬಾಸ್ಕೆಟ್ ಬಾಲ್ ಪಂದ್ಯಾವಳಿಯ ವಿಡಿಯೋವೊಂದು ಶೇರ್ ಮಾಡಲಾಗಿತ್ತು. ಅದರಲ್ಲಿನ 14 ವರ್ಷದ ಬಾಲಕಿ ಝಾಂಗ್ ಜಿಯು ಎತ್ತರ ಬರೋಬ್ಬರಿ 7 ಅಡಿ 4 ಇಂಚು. ಅಂಡರ್ 15 ವರ್ಷದ ಚಾಂಪಿಯನ್ ಶಿಪ್ ನಲ್ಲಿ ಈಕೆ ತಂಡಕ್ಕೆ 42 ಅಂಕ ತಂದು ಕೊಟ್ಟಿದ್ದಾಳೆ.

ಜಿಯು ಎತ್ತರವನ್ನ ಚೀನಾದ ಸ್ಟಾರ್ ಬಾಸ್ಕೆಟ್ ಬಾಲ್ ಆಟಗಾರ ಯಾ ಮಿಂಗ್ ಗೆ ಹೋಲಿಕೆ ಮಾಡಲಾಗ್ತಿದೆ. ಕಾರಣ ಆತನ ಎತ್ತರ ಸಹ 7.4 ಅಡಿ ಇದೆ. ಇನ್ನು ಜಿಯು ಪೋಷಕರು ಸಹ ಬಾಸ್ಕೆಟ್ ಬಾಲ್ ಆಟಗಾರರಾಗಿದ್ದಾರೆ. ತಂದೆಯ ಎತ್ತರ 6 ಅಡಿ 9 ಇಂಚು ಹಾಗೂ ತಾಯಿ 6 ಅಡಿ 4 ಇಂಚು ಇದ್ದಾರೆ.




Leave a Reply

Your email address will not be published. Required fields are marked *

error: Content is protected !!