75ನೇ ಸ್ವಾತಂತ್ರ್ಯೋತ್ಸವ: ಪ್ರಧಾನಿ ಭಾಷಣದ ಪ್ರಮುಖ ಅಂಶಗಳು

259

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ಮೋದಿ ರಾಷ್ಟ್ರರಾಜಧಾನಿಯ ಕೆಂಪು ಕೋಟೆಯ ಮೇಲೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದರು. ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ಗಾಂಧೀಜಿ, ಭೋಸ್, ಆಜಾದ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ನೆಹರು, ಸರ್ದಾರ್ ವಲ್ಲಾಬಾಯ್ ಪಟೇಲ್ ಸೇರಿದಂತೆ ಹಲವು ನಾಯಕರ ತ್ಯಾಗ ಬಲಿದಾನವನ್ನ ಸ್ಮರಿಸಿದ್ರು.

ಇದೆ ಹಲವು ಪ್ರಮುಖ ವಿಚಾರಗಳು ಹಾಗೂ ಮುಂದಿನ ದಿನಗಳಲ್ಲಿ ಸಾಧಿಸಬೇಕಾದ ಗುರಿಗಳ ಕುರಿತು ಮಾತ್ನಾಡಿದ್ರು. ವಿಶ್ವದಲ್ಲಿಯೇ ಅತಿದೊಡ್ಡ ಕರೋನಾ ಲಸಿಕೆ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಇದುವರೆಗೂ 54 ಕೋಟಿ ಭಾರತೀಯರು ಲಸಿಕೆ ಪಡೆದಿದ್ದಾರೆ. ಈ ಸೋಂಕಿನಿಂದ ಅದೆಷ್ಟೋ ಮಕ್ಕಳು ಅನಾಥರಾಗಿದ್ದು, ಇದರ ನಡುವೆಯೂ ಹೊಸ ಸಂಕಲ್ಪದೊಂದಿಗೆ ಮುಂದೆ ಸಾಗಬೇಕಿದೆ ಎಂದರು.

ಮುಂದಿನ 25 ವರ್ಷಗಳ ಬಳಿಕ ಶತಮಾನೋತ್ಸವ ಆಚರಿಸುವ ಹೊತ್ತಿನಲ್ಲಿ ಎಲ್ಲ ಟೆಕ್ನಾಲಜಿ ಇರಬೇಕು. ಯಾವ ದೇಶಕ್ಕೂ ಕಡಿಮೆ ಇಲ್ಲದಂತೆ ಸಾಧಿಸಬೇಕು. ದೇಶವನ್ನ ಬದಲಾವಣೆ ಮಾಡಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಜೊತೆಗೆ ಸಬ್ ಕಾ ಪ್ರಯಾಸ್ ಅನ್ನೋ ಹೊಸ ಘೋಷಣೆ ಹೇಳಿದ್ರು.

ದೇಶದ ಪ್ರತಿ ಗ್ರಾಮಗಳಲ್ಲಿ ಶೇಕಡ 100ರಷ್ಟು ರಸ್ತೆ, ಬ್ಯಾಂಕ್ ಖಾತೆ, ವಿಮಾ ಯೋಜನೆ, ಪಿಂಚಣಿ, ವಸತಿ ಯೋಜನೆ, ಆಯುಷ್ಮಾನ್ ಯೋಜನೆ ತಲುಪಬೇಕು. ಪುಟ್ ಪಾತ್ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ, ಪ್ರತಿ ಮನೆಗಳಿಗೂ ಶೌಚಾಲಯಕ್ಕೆ ಪ್ರಮಾಣಿಕ ಪ್ರಯತ್ನ. ಹರ್ ಘರ್ ಜಲ್ ಮಿಷನ್ ಯೋಜನೆ ಮೂಲಕ 2 ವರ್ಷದಲ್ಲಿ 4.5 ಕೋಟಿ ಮನೆಗಳಿಗೆ ನೀರು ಒದಗಿಸಲಾಗ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲಾಗ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾಗ್ತಿದೆ. ದೇಶದಲ್ಲಿ ಬಹುತೇಕ ರೈತರ ಬಳಿಕ 2 ಹೆಕ್ಟೇರಗಿಂತ ಕಡಿಮೆ ಭೂಮಿಯಿದ್ದು, 10 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಲಾಭವಾಗುತ್ತಿದೆ ಎಂದು ತಿಳಿಸಿದ್ರು.

ಆಜಾದಿ ಕಾ ಅಮೃತಮಹೋತ್ಸವ 2023ರ ತನಕ ಮುಂದುವರೆಯಲಿದೆ. ಪ್ರಧಾನಮಂತ್ರಿ ಗತಿ ಶಕ್ತಿಯ ನ್ಯಾಷನಲ್ ಮಾಸ್ಟರ್ ಪ್ಲಾನ್ ಗೆ ಚಾಲನೆ ನೀಡಲಾಗ್ತಿದ್ದು, 100 ಲಕ್ಷ ಕೋಟಿ ಯೋಜನೆಯ ಮೂಲಕ ಉದ್ಯೋಗ ಸೃಷ್ಟಿಸಲಾಗ್ತಿದೆ. ಹೀಗೆ ಹಲವು ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ಮಾತ್ನಾಡಿದ್ರು.




Leave a Reply

Your email address will not be published. Required fields are marked *

error: Content is protected !!