ಕನ್ನಡ ಸಾಹಿತ್ಯ ಸಮ್ಮೇಳನ: ಮಳಿಗೆ ನೋಂದಣಿ ಆರಂಭ

577

ಕಲಬುರಗಿ: ಶರಣರ ನಾಡಿನಲ್ಲಿ ಫೆಬ್ರವರಿ 5, 6 ಹಾಗೂ 7ರಂದು ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಳಿಗೆ ತೆರೆಯಲು ನೋಂದಣಿ ಕಾರ್ಯ ಶುರುವಾಗಿದೆ. ಇಂದಿನಿಂದ ಮಳಿಗೆ ನೋಂದಣಿ ಆರಂಭವಾಗಿದೆ.

3 ದಿನಗಳ ಸಮ್ಮೇಳನದಲ್ಲಿ ಒಂದು ಮಳಿಗೆಗೆ 2,500 ರೂಪಾಯಿ ಬಾಡಿಗೆ. ವಾಣಿಜ್ಯ ಮಳಿಗೆಗಳಿಗೆ 3 ಸಾವಿರ ರೂಪಾಯಿ ಬಾಡಿಗೆ ನಿಗದಿಯಾಗಿದೆ. ಬೆಂಗಳೂರಿನ ಕೇಂದ್ರ ಸಾಹಿತ್ಯ ಪರಿಷತ್ ನಲ್ಲಿ ಹಾಗೂ ಕಲಬುರಗಿಯ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಲ್ಲಿ ಮಳಿಗೆ ನೋಂದಣಿ ಮಾಡಬಹುದಾಗಿದೆ. 2020, ಜನವರಿ 14 ಕೊನೆಯ ದಿನವಾಗಿದೆ.

ಮಳಿಗೆ ಸೌಲಭ್ಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೀರಭದ್ರ ಸಿಂಪಿ (9448577411/9900838003/08472-277411) ಅವರನ್ನ ಸಂಪರ್ಕಿಸಬಹುದಾಗಿದೆ ಅಂತಾ ಗೌರವ ಕೋಶಾಧ್ಯಕ್ಷರಾದ ಪಿ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!