ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಘಟನೆ ಸಂಬಂಧ, ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಷ ಟ್ವೀಟ್ ಮಾಡಿದ್ದಾರೆ. ಇಡೀ ಘಟನೆಯನ್ನ ನಟಿ ಟ್ವೀಟ್ ಮೂಲಕ ಖಂಡಿಸಿದ್ದಾರೆ.
ಪೊಲೀಸ್ ಸ್ಟೇಷನ್ ಹಾಗೂ ಪತ್ರಕರ್ತರ ಮೇಲೆ ನಡೆದ ಹಲ್ಲೆ ಖಂಡನಾರ್ಹ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ನಟಿ ಪ್ರಣಿತಾಗೂ ಮೊದ್ಲು ನಟ ಚೇತನ ಘಟನೆಯನ್ನ ಖಂಡಿಸಿದ್ರು. ಆದ್ರೆ, ಉಳಿದಂತೆ ಕನ್ನಡ ಸಿನಿ ರಂಗದ ಯಾವೊಬ್ಬ ನಟ, ನಟಿಯರು ತುಟಿಬಿಚ್ಚಿಲ್ಲ.