ಪ್ರಜಾಸ್ತ್ರ ಅಪರಾಧ ಸುದ್ದಿ
ಧಾರವಾಡ: ವಿದ್ಯಾಕಾಶಿ, ಪೇಡಾ ನಗರಿ ಅಂತೆಲ್ಲಾ ಕರೆಯುವ ಧಾರವಾಡದ ಜನತೆ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಅಪ್ರಾಪ್ತೆ ಮೇಲೆ ಸಾಮಾಹಿಕ ಅತ್ಯಾಚಾರ ನಡೆದಿದೆ.
ಬಾಲಕಿಯನ್ನು ನಗರದ ಹೊರವಲಕ್ಕೆ ಬಲವಂತದಿಂದ ಕರೆದ್ಯೊಯ್ದ ಐವರ ಯುವಕರ ತಂಡ ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ. ಶಹರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.