ಆರೂರು ಗೆಳೆಯರ ಬಳಗದ ಜಗ ಮೆಚ್ಚುವ ಕಾಯಕ

1219

ಪ್ರಜಾಸ್ತ್ರ ವಿಶೇಷ

ಸಮಾಜಮುಖಿ ಕೆಲಸಗಳು ಹೇಗೆ ನಡೆಯಬೇಕು ಅನ್ನೋದಕ್ಕೆ ಆರೂರು ಗೆಳೆಯರ ಬಳಗ ಸಾಕ್ಷಿಯಾಗಿ ನಮ್ಮ ಕಣ್ಣು ಮುಂದೆ ಇದೆ. ಹತ್ತು ಹಲವು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಹೊರಟಿರುವ ಈ ಬಳಗ ಮತ್ತೊಂದು ಮಹತ್ತರ ಕೆಲಸ ನಡೆಸುತ್ತಿದ್ದು, ಈ ಬಗ್ಗೆ ಸ್ವತಃ ಬಳಗದ ಅಧ್ಯಕ್ಷರಾದ ಮಡಿವಾಳಪ್ಪ ಕರದಾಳಿ ಅವರ ಬರಹ ಇಲ್ಲಿದೆ.

ಈಗ ನಾನು ನಿಮಗೆ ಹೇಳ ಹೊರಟಿರುವುದು ದೇವರ ಹಿಪ್ಪರಗಿ ತಾಲ್ಲೂಕಿನ ಹಂಚಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ. ಇತ್ತೀಚೆಗೆ ನಮ್ಮ ಊರಿನ ಶಾಲಿ ಸ್ಥಿತಿ ಪತ್ರಿಕೆಯಲ್ಲಿ ನೋಡಿ ಮನಸ್ಸಿಗೆ ನೋವಾಯಿತು. ಇಂತಹ ವಾತಾವರಣದಲ್ಲಿ ನಮ್ಮೂರಿನ  ನಮ್ಮ ಭವಿಷ್ಯ (ಮಕ್ಕಳು) ಅರುಳಲು ಅನಾನುಕೂಲ ವ್ಯವಸ್ಥೆ ಮನದಟ್ಟದಾಗ, ಆರೂರು ಗೆಳೆಯರ ಬಳಗದ ಸಂಸ್ಥಾಪಕರಾದ ಚಂದ್ರಕಾಂತ ಸೊನ್ನದ ಅವರ ನೇತೃತ್ವದಲ್ಲಿ ಒಂದು ಖಾಸಗಿ ಸಭೆ ನಡೆಸಿ, ಶಾಲೆಯಲ್ಲಿ ಹೇಗಾದರೂ ಮಾಡಿ ಒಳ್ಳೆಯ ವಾತಾವರಣ ಮೂಡಿಬರುವಂತೆ ಮಾಡಬೇಕು ಎಂದು  ಚರ್ಚಿಸಿದೆವು.

ಈಗಾಗಲೆ ಈ ತರದ ಸೃಜನಾತ್ಮಕ ವಿಚಾರಗಳನ್ನೊಳಗೊಂಡ ನಮ್ಮ ಆರೂರು ಗೆಳೆಯರ ಬಳಗ ಹಲವಾರು ಕಾರ್ಯಗಳನ್ನು ಮಾಡಿದೆ. ದೇವರ ಹಿಪ್ಪರಗಿ ಹಾಗೂ ತಾಳಿಕೋಟೆ ರಸ್ತೆ ಹೋರಾಟ ಇರಬಹುದು, ಕೋವಿಡ್ ಒಂದನೆ ಅಲೇ ಬಂದಾಗ ಬಾಣಂತಿಯರಿಗೆ ಪುಡ್ ಕಿಟ್ ಮತ್ತು ಹಿರಿಯರಿಗೆ ಮಾತ್ರೆಗಳನ್ನು ಕೊಟ್ಟಿದ್ದೂ ಆಗಿರಬಹುದು, ಈ ಎಲ್ಲವೂ ಯಶಸ್ವಿಯಾಗಿ ನಿಭಾಯಿಸಿರುವುದರಿಂದ ನಮಗೂ ಶಾಲೆಯನ್ನು ಅಭಿವೃದ್ಧಿ ಮಾಡಬಹುದು ಎಂಬ ದೈರ್ಯ ಬಂತು. ಈಗ ಶಾಲೆಯ ವಿಚಾರಕ್ಕೆ ಬರೋಣ.

ಶಾಲೆಗೆ ಸುಣ್ಣ ಬಣ್ಣದ ಕೆಲಸ

ಆ ದಿನ, ಚಂದ್ರಕಾಂತ ಸೊನ್ನದ ಅವರು, ಒಂದು ಹೊಚ್ಚ ಹೊಸದಾದ ವಿಚಾರವನ್ನು ಮಂಡಿಸಿದರು. ಆಗಲಿ ಎಂದು ಒಂದು ಯೋಜನೆಯನ್ನು ಹಮ್ಮಿಕೊಂಡ್ವಿ. ಆ ಯೋಜನೆ ಏನು ಅಂದ್ರ, ಬರಿ ಬಣ್ಣ ಬಳೆಯುವುದಲ್ಲ. ಬಣ್ಣದ ಜೊತೆ ನೆಲಮೂಲದ ತತ್ವ, ವಿಚಾರಗಳು ಮಕ್ಕಳ ಬದುಕಿನ ಭಾಗವಾಗಲಿ ಅನ್ನುವ ಕಲ್ಪನೆ ರೋಮಾಂಚನದ ಸಂಗತಿ!

ಮೊದಲು ಬರಿ ಬಣ್ಣ ಬಳಿಬೇಕು ಅಂದುಕೊಂಡು ಶುರುವಾದ ಕಲ್ಪನೆ, ನೆಲದ ತತ್ವ ಮಕ್ಕಳಿಗೆ ಹೇಳಬೇಕೆನಿಸಿದ್ದನ್ನು ವಿಸ್ತೃವಾಗಿ ಚರ್ಚಿಸಿ, ಶಾಲೆಯ ಪ್ರತಿಯೊಂದು ಕೋಣೆಯ ಗೋಡೆ ಮೇಲೆ ದಾರ್ಶನಿಕರ ಸ್ಮರಣೆಗೆ ಮತ್ತು ಅನೂಭಾವಕ್ಕೆ ಒಂದು ದೊಡ್ಡ ಪರದೇ ಆಗಲಿ ಅಂತ ಆಶಿಸಿದವರು ನಮ್ಮ ಚಂದ್ರಕಾಂತ ಸೊನ್ನದ. ಅವರು ಈ ರೀತಿಯ ನಿಲುವು ತಾಳಿದ ಮೇಲೆ ನಾವೆಲ್ಲ ಆರೂರಿನ ಗೆಳೆಯರ ಬಳಗದ ಸದಸ್ಯರು, ಒಕ್ಕೊರಿಲಿನಿಂದ ಸಹಮತ ವ್ಯಕ್ತಪಡಿಸಿದೆವು. ಆ ಕಲ್ಪನೆಯ ಮೇರೆಗೆ ಪ್ರತಿಯೊಂದು ಕೋಣೆ (ವರ್ಗ) ಮೇಲೆ, ಅಣ್ಣ ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್,  ಸಂತ ಕನಕದಾಸರು, ಕಿತ್ತೂರು ರಾಣಿ ಚೆನ್ನಮ್ಮ, ಶಂಗು ಬಿರಾದಾರ ಅಂತಃ ದಾರ್ಶನಿಕರ ಮತ್ತು ಸಾಹಿತಿಗಳ ಕಿರು ಬರಹ ಮತ್ತು ಅವರು ವ್ಯಕ್ತಪಡಿಸಿದ ಮಾನವೀಯ ಮೌಲ್ಯಗಳನ್ನು ಗೋಡೆ ಮೇಲೆ ಬರೆಸುವ ಯೋಜನೆ ಸಿದ್ಧವಾಯಿತು.

ಈ ಯೋಜನೆಗೆ ಬೇಕಾದ ಸಂಪನ್ಮೂಲಗಳು ಪಟ್ಟಿ ಮಾಡಿ, ಬೇಕಾಗುವ ಹಣದ ವ್ಯವಸ್ಥೆ ಮಾಡಲು ಹೊರಟಾಗ ಮೊದಲು ದಾಸೋಹಿಯಾಗಿ ಹಣ ನಿಡಲು ಮುಂದಾಗಿದ್ದು ಕೊಂಡಗೂಳಿಯ ಬಸವ ಪಾಟೀಲ್ ಸಧ್ಯ ಇಂಗ್ಲೆಂಡ್ ಅಲ್ಲಿ ನೆಲೆಸಿದ್ದಾರೆ. ಅವರು 25 ಸಾವಿರ ರೂಪಾಯಿ ಕೊಟ್ಟರು. ಇವರೂ ನಮ್ಮ ಆರೂರ ಗೆಳೆಯರ ಬಳಗದ ಸಂಸ್ಥಾಪಕರು,  ಚಂದ್ರಕಾಂತ ಸೊನ್ನದ ಅವರೂ ಕೂಡಾ 50 ಸಾವಿರ ಕೊಟ್ಟು ಅವರೂರ ಶಾಲೆಯ ಮೇಲಿರುವ ಅಭಿಮಾನ ತೋರಿಸಿದರು.  ಹಾಗೆಯೇ, ಚಂದ್ರಕಾಂತ ಸೊನ್ನದ ಅವರ ದೊಡ್ಡ ಗೆಳೆಯರ ಬಳಗವೆ ಇದೆ ಅವರೂ ಕೂಡಾ ಶಾಲೆಯ ಅಭಿವೃದ್ಧಿಗೆ ಹಣದ ಸಹಾಯ ಮಾಡಲು ಮುಂದಾದರು. ಸಿಂದಗಿಯ ಪ್ರಶಾಂತ ಗೌಡ ಪಾಟೀಲ 5 ಸಾವಿರ, ಸುಭಾಸ ಗೌಡ ಪಾಟೀಲ 5 ಸಾವಿರ, ಬೆಂಗಳೂರಲ್ಲಿರುವ ಸಿದ್ದಲಿಂಗ ಪೂಜಾರಿ ಅವರೂ ಕೂಡಾ 50 ಸಾವಿರ ಮತ್ತು ಬಳ್ಳಾರಿ ಜೈಲಿನ ಮುಖ್ಯಸ್ಥರಾದ ಲತಾ ಅವರು ಕೂಡಾ 25 ಸಾವಿರ ಕೊಡಲು ಮುಂದಾದರು. ಹೀಗೆ ದಾಸೋಹ ನಡೆಯಿತು. ಪ್ರೀತಿಯ ಸ್ನೇಹಿತರ ಬಳಗದಿಂದ ಹಣದ ಸಹಾಯ ಆಯಿತು. ಇನ್ನು ನಮ್ಮ ಆರೂರ ಗೆಳೆಯರ ಬಳಗದ ಹಿತೈಸಿ ಎಂದು ಹೇಳಬಹುದಾದ ಕೊಂಡಗೂಳಿಯ ಗ್ರಾಮ ಪಂಚಾಯತ್ ಪಿಡಿಓ ಅವರು ನಾವು ಏನೇ ಮಾಡಿದರೂ ದಾಸೋಹಿಗಳಾಗುತ್ತಾರೆ. ಅವರೂ ಕೂಡಾ 15 ಸಾವಿರ ಕೊಟ್ಟರು.

ಇದರ ಜೊತೆಗೆ ಹಂಚಲಿ ಊರಿನ ಶಿಕ್ಷಣ ಪ್ರೇಮಿಗಳು ತಮ್ಮ ಇಚ್ಛಾನುಸಾರ ದೇಣಿಗೆಯನ್ನು ನೀಡಿ ಶಿಕ್ಷಣ ದಾಸೋಹಕ್ಕೆ ಕಾರಣರಾದರು. ಅದರಲ್ಲೂ ಹಂಚಲಿಯ ಬಸು ಕುಂಟೋಜಿಯವರು ಶಾಲೆಯ ಮಕ್ಕಳಿಗೆ ಕುಡಿಯುವ  ನೀರಿಗೆ ಪಿಲ್ಟರ್ ಮಷಿನ್( ಸುಮಾರು 25 ರಿಂದ 30 ಸಾವಿರದ್ದು) ಕೊಡಿಸಲು ಮುಂದಾದಾಗ ಬಹಳ ಸಂತೋಷ ನಮ್ಮ ಗೆಳೆಯರ ಬಳಗಕ್ಕೆ. ಈ ಯೋಜನೆಯ ಬಗೆಗೆ ಕೇಳಿ ಹಂಚಲಿಯವರೆ ಆದ ಸಧ್ಯ ವಿಜಯಪುರದಲ್ಲಿ ನೆಲೆಸಿರುವ ಮಲ್ಲು ತಾಳಿಕೋಟಿಯವರೂ 10 ಸಾವಿರ ನಿಡಿದರು. ಹಂಚಲಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಸಾಹೇಬಗೌಡ ಯಲಗೋಡ ಅವರೂ ಕೂಡಾ 5 ಸಾವಿರ ನಿಡಿದರು. ಹೀಗೆ ಪಟ್ಟಿ ಬೆಳೆಯುತ್ತಾ ಹೋಯಿತು. ಹಲವು ಜನರು ಎರಡು ಸಾವಿರ ಕೂಡಾ ಕೊಟ್ಟಿದ್ದಾರೆ.

ಈಗ ಶಾಲೆಗೆ ಬಣ್ಣ ಹಚ್ಚುವ ಕಾರ್ಯ ಬರದಿಂದ ನಡೆದಿದೆ. ಅಗಷ್ಟ 15 ರೊಳಗೆ ಮುಗಿಸಿ ಅವತ್ತು ಕಾರ್ಯಕ್ರಮ ಮಾಡುವ ಯೋಜನೆ ನಮ್ಮದಾಗಿದೆ. ತಾವೂ ಬಂದು ಭಾಗವಹಿಸಿ ನಮ್ಮ ಈ ಯೋಜನೆಯನ್ನು ಯಶಸ್ವಿಗೊಳಿಸಲು, ಪಣತೊಟ್ಟು ಕಾಯಕ ನಿರತರಾದ, ಶಾಲಾ ಸಿಬ್ಬಂದಿ ವರ್ಗ, ಮುಖ್ಯೋಪಾಧ್ಯಾಯರು, ಮತ್ತು ಹಂಚಲಿಯ  ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರು ಅವರಿಗೆಲ್ಲ ಆರೂರು ಗೆಳೆಯರ ಬಳಗದಿಂದ ಸಾವಿರ ಶರಣು. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಶಿಕ್ಷಣ ಮುಖ್ಯ. ಹಾಗಾಗಿ ಮಕ್ಕಳ ಕಲಿಕೆಗಾಗಿ ಎರಡೂ ಕಂಪ್ಯೂಟರ್ ಮತ್ತೂ ಅರಣ್ಯ ಇಲಾಖೆಯವರೊಂದಿಗೆ ಮಾತನಾಡಿ ಆವರಣದಲ್ಲಿ ಗಿಡ ಹಚ್ಚುವ ಕಾರ್ಯ ಕೂಡಾ ನಮ್ಮ ಮುಂದಿವೆ. ಮತ್ತೂಮ್ಮೆ, ಪ್ರತಕ್ಷ್ಯ ಮತ್ತು ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಆತ್ಮೀಯರಿಗೆ ಶರಣು ಶರಣಾರ್ಥಿ.




Leave a Reply

Your email address will not be published. Required fields are marked *

error: Content is protected !!