ಬ್ರೇಕಿಂಗ್ ನ್ಯೂಸ್
Search

ಹಿರಿಯ ನಟಿ ಲೀಲಾವತಿ ಭೇಟಿಯಾದ ಶಿವಣ್ಣ

287

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(86) ಅವರ ಆರೋಗ್ಯದಲ್ಲಿ ಸಾಕಷ್ಟು ಏರಿಳಿತ ಕಂಡು ಬಂದಿದೆ. ಹೀಗಾಗಿ ಸ್ಯಾಂಡಲ್ ವುಡ್ ತಾರೆಯರು ಬಂದು ಭೇಟಿಯಾಗುತ್ತಿದ್ದಾರೆ. ಇದೇ ರೀತಿ ಮಂಗಳವಾರ ನಟ ಶಿವರಾಜಕುಮಾರ್ ಹಾಗೂ ಪತ್ನಿ ಗೀತಾ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಸೋಲದೇವನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ. ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ಧ್ರುವ್ ಸರ್ಜಾ ಸೇರಿದಂತೆ ಅನೇಕರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಶಿವಣ್ಣ ದಂಪತಿ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಶಿವರಾಜಕುಮಾರ್, ಲೀಲಾವತಿ ಅಮ್ಮ ನನ್ನ ಧ್ವನಿ ಗುರುತಿಸಿದರು. ಅವರ ಸ್ಥಿತಿ ನೀಡಿ ಬೇಸರವಾಗುತ್ತದೆ. ದೇವರ ಆಶೀರ್ವಾದ, ಜನರ ಪ್ರೀತಿ ಇದೆ. ಬೇಗ ಹುಷಾರಾಗುತ್ತಾರೆ. ನನಗೂ ವಿನೋದ್ ಅವರಿಗೂ ಇರುವ ಆತ್ಮೀಯತೆ ನಮಗಷ್ಟೇ ಗೊತ್ತು. ಅವರು ಧೈರ್ಯವಾಗಿರಬೇಕು ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!