ಮದುವೆ ಬಗ್ಗೆ ‘ನೀರ್ ದೋಸೆ’ ಬ್ಯೂಟಿ ಹೇಳಿದ್ದೇನು?

419

ನಟಿ ಹರಿಪ್ರಿಯಾ ಮದುವೆಯಾಗ್ತಾರೆ ಅನ್ನೋ ಸುದ್ದಿ ಗಾಂಧಿ ನಗರದಲ್ಲಿ ಭರ್ಜರಿಯಾಗಿ ಸೌಂಡ್ ಮಾಡ್ತಿದೆ. ಈ ಬಗ್ಗೆ ಎಲ್ಲೆಡೆ ನ್ಯೂಸ್. ಹತ್ತು ಹಲವು ವಿಭಿನ್ನ ಪಾತ್ರಗಳ ಮೂಲಕ ಮಿಂಚುತ್ತಿರುವ ಚೆಲುವೆ ಕೈಹಿಡಿಯುವ ಹುಡ್ಗ ಯಾರು ಅನ್ನೋ ಪ್ರಶ್ನೆಗಳ ಮೇಲೆ ಪ್ರಶ್ನೆಗಳು. ಹರಿಪ್ರಿಯಾ ಅಭಿಮಾನಿಗಳಲ್ಲಂತೂ ಕುತೂಹಲ. ಆದ್ರೆ, ಈ ಬಗ್ಗೆ ನಟಿ ಟ್ವೀಟ್ ಮೂಲಕ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾಳೆ.

ನೋ.. ಸದ್ಯಕ್ಕೆ ಮಾದುವೆ ಆಗುತ್ತಿಲ್ಲ. ನನ್ನ ವಿಭಿನ್ನ ಪಾತ್ರಗಳೊಂದಿಗೆ ಎಂಜಾಯ್ ಮಾಡ್ತಿದ್ದೇನೆ. ಮದುವೆಯಾಗಲು ಜೀವನ ಸಂಗಾತಿ ಬೇಕು. ಆ ತರಹದ ವ್ಯಕ್ತಿ ನನ್ನ ಜೀವನದಲ್ಲಿ ಇದುವರೆಗೂ ಬಂದಿಲ್ಲವೆಂದು ಟ್ವೀಟ್ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು ಸಿನ್ಮಾಗಳಲ್ಲಿಯೂ ಮಿಂಚುತ್ತಿರುವ ಹರಿಪ್ರಿಯಾ ಸದ್ಯ ಫುಲ್ ಬ್ಯುಸಿಯಾಗಿದ್ದಾರೆ. ಕನ್ನಡ್ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲಿ ತನಕ, ಕಥಾಸಂಗಮ, ದಳವಾಯಿ ಮತ್ತು ಬಿಚ್ಚುಗತ್ತಿ-1 ಸಿನ್ಮಾದಲ್ಲಿ ಬ್ಯುಸಿಯಾಗಿದ್ದಾಳೆ. ಹರಿಪ್ರಿಯಾ ಮದುವೆ ಎಂದಾಕ್ಷಣ ಶಾಕ್ ಆಗಿದ್ದವರು ಆಕೆಯ ಟ್ವೀಟ್ ನೋಡಿ ಖುಷಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!