ಅ.3ಕ್ಕೆ ಬ್ಯಾಡ್ ಮ್ಯಾನರ್ಸ್ ಟೀಸರ್

134

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೂನಿಯರ್ ರೆಬಲ್ ಸ್ಟಾರ್ ಅಂಬರೀಶ್, ನಟ ಅಭಿಷೇಕ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ ಅಕ್ಟೋಬರ್ 3ರಂದು ರಿಲೀಸ್ ಆಗಲಿದೆ. ಅಂದು ನಟ ಅಭಿಷೇಕ್ 29ನೇ ಹುಟ್ಟು ಹಬ್ಬ. ಇದರ ಪ್ರಯುಕ್ತ ಟೀಸರ್ ರಿಲೀಸ್ ಆಗುತ್ತಿದೆ.

ಸೋಮವಾರ ಬೆಳಗ್ಗೆ 10.30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗಲಿದೆ. ನಿರ್ದೇಶಕ ಸೂರಿ ಗರಡಿಯಿಂದ ಬರುತ್ತಿರುವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ನಟಿ ರಚಿತಾ ರಾಮ್ ಅಭಿಗೆ ಜೋಡಿಯಾಗಿದ್ದಾರೆ. ಸ್ಟುಡಿಯೋ 18 ಹೆಸರಿನಲ್ಲಿ ಸುಧೀರ್ ಕೆ.ಎಂ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಿರ್ದೇಶಕ ಸೂರಿ ಚಿತ್ರ ಎಂದ್ಮೇಲೆ ಖಂಡಿತ ಅದು ಮಾಸ್ ಮೂವಿ. ಅವರದೇ ಶೈಲಿಯಲ್ಲಿ ಸಿನಿಮಾ ತೆಗೆಯುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿರುವ ಸೂರಿ, ದುನಿಯಾ ವಿಜಿಗೆ, ಡಾಲಿ ಧನಂಜಯ್ ಗೆ, ಶ್ರೀನಗರ ಕಿಟ್ಟಿಗೆ ಹೊಸ ಇಮೇಜ್ ತಂದುಕೊಟ್ಟವರು. ಹೀಗಾಗಿ ಸೂರಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.




Leave a Reply

Your email address will not be published. Required fields are marked *

error: Content is protected !!