ಮೂರು ಮದ್ವೆಯಾದ್ರೂ ಅತ್ಯಂತ ಸುಂದರಿ ನಟಿ ಏಕಾಂಗಿ

488

ಈಕೆ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬಳು. ವರ್ಲ್ಡ್ ವೈಡ್ ಹೆಸರು ಗಳಿಸಿದ ಹಾಲಿವುಡ್ ನ ಸ್ಟಾರ್ ನಟಿ ಏಂಜಲೀನಾ ಜೂಲಿ. ಸಿನಿ ಪ್ರೇಮಿಗಳಿಗೆ ಈಕೆ ಅತ್ಯಂತ ಚಿರಪರಿಚಿತ ಫೇಸ್. ಇಂತಾ ಬ್ಯೂಟಿ ಮೂರು ಮದ್ವೆಯಾಗಿದ್ರೂ ಈಗ ಏಕಾಂಗಿಯಾಗಿದ್ದಾಳೆ. ಯಾರೊಂದಿಗೂ ಇಲ್ಲದೆ ಒಂಟಿತನದ ಜೀವನ ನಡೆಸ್ತಿದ್ದಾಳೆ.

ಯೆಸ್, ಬಾಲ್ಯದಲ್ಲಿಯೇ ಸಿನಿ ಪಯಣ ಶುರು ಮಾಡಿದ ನಟಿ ಏಂಜಲೀನಾ ಜೂಲಿ ವಿಶ್ವ ಪ್ರಸಿದ್ಧ ನಟಿ. ತನ್ನ ಸೌಂದರ್ಯದಿಂದಲೂ ಅನೇಕರ ಹೃದಯ ಕದ್ದವಳು. ಇಂಥಾ ನಟಿ ಮೊದಲು ಮದ್ವೆಯಾಗಿದ್ದು ಮಾರ್ಚ್ 26, 1996ರಲ್ಲಿ. ಜಾನಿ ಲೀ ಮಿಲ್ಲರ್ ಜೊತೆಗಿನ ಏಂಜಲೀನಾ ಸಂಬಂಧ 1999ರಲ್ಲಿ ಮುರಿದು ಬೀಳುತ್ತೆ. ಬಳಿಕ ಬಿಲ್ಲಿ ಬಾಬ್ ಥಾರ್ನ್ಟನ್ ಜೊತೆ ಎರಡನೇ ಮದುವೆ ಮಾಡಿಕೊಕೊಳ್ತಾಳೆ. ಇದು 2003ರಲ್ಲಿ ಬ್ರೇಕ್ ಅಪ್ ಆಗುತ್ತೆ.

2005ರ ಟೈಂನಲ್ಲಿ ಬ್ರಾಡ್ ಪಿಟ್ ಜೊತೆ ಪ್ರೀತಿ, ಪ್ರೇಮದ ಸುದ್ದಿ ಭರ್ಜರಿಯಾಗಿ ಹರಿದಾಡಿತು. ಮುಂದೆ ಏಂಜಲೀನಾ 2006ರಲ್ಲಿ ಪಿಟ್ ಮಗುವಿನ ತಾಯಿಯಾದ್ಳು. ಆದ್ರೆ, ಇದು ಸಹ ಹೆಚ್ಚು ದಿನ ಉಳಿಯಲಿಲ್ಲ. ಹೀಗಾಗಿ ವಿಶ್ವದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬಳಾಗಿರುವ ಏಂಜಲೀನಾ ಜೂಲಿ ಇಂದು ಒಂಟಿತನ ಅನುಭವಿಸ್ತಿದ್ದಾಳೆ.




Leave a Reply

Your email address will not be published. Required fields are marked *

error: Content is protected !!