ರಾಜಧಾನಿ ಬಿಡ್ತಿರುವ ಜನತೆ

359

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಾಳೆ ರಾತ್ರಿ 8ಗಂಟೆಯಿಂದ ಒಂದು ವಾರಗಳ ಕಾಲ ಸಿಲಿಕಾನ್ ಸಿಟಿ ಸಂಪೂರ್ಣ ಲಾಕ್ ಡೌನ್ ಆಗ್ತಿದೆ. ಇದರ ಜೊತೆಗೆ ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಬೇಕಾ ಬೇಡವಾ ಅನ್ನೋ ಚರ್ಚೆ ನಡೆದಿದೆ. ಹೀಗಾಗಿ ರಾಜಧಾನಿಯಲ್ಲಿ ವಾಸವಾಗಿರುವ ಜನರು ಊರುಗಳಿಗೆ ಹೊರಟಿದ್ದಾರೆ.

ನಗರ ಮೆಜೆಸ್ಟಿಕ್ ಬಸ್ ನಿಲ್ದಾಣ, ಸ್ಯಾಟ್ ಲೈಟ್ ಬಸ್ ಸ್ಯಾಂಡ್, ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲಡೆಯಿಂದ ಜನರು ಊರುಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಇಂದು ಹಾಗೂ ನಾಳೆ ಕೆಎಸ್ಆರ್ ಟಿಸಿಯಿಂದ ಹೆಚ್ಚುವರಿಯಾಗಿ 800 ಬಸ್ ಗಳನ್ನ ಬಿಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಯೊಳಗೆ ಹೋದ 333 ಬಸ್ ಗಳಲ್ಲಿ 8,938 ಜನರು ತಂತಮ್ಮ ಊರುಗಳಿಗೆ ತೆರಳಿದ್ದಾರೆ. 231 ಬಸ್ ಗಳಲ್ಲಿ ಜನರು ಬುಕ್ಕಿಂಗ್ ಸಹ ಮಾಡಿದ್ದಾರೆ. ಇದ್ರಿಂದಾಗಿ ಇಷ್ಟು ದಿನಗಳ ಕಾಲ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣಗಳು ಇದೀಗ ತುಂಬಿ ತುಳುಕುತ್ತಿವೆ.

ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಊರುಗಳಿಗೆ ತೆರಳುತ್ತಿದ್ದಾರೆ. ಪ್ರಯಾಣಿಕರ ನಿಯಂತ್ರಣಕ್ಕಾಗಿ ಹೆಚ್ಚುವರಿ ಬಸ್ ಬಿಡಲಾಗಿದೆ. ಥ್ರಮಿಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಸೇರಿದಂತೆ ಮೆನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡು ಬಿಡಲಾಗ್ತಿದೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!