ಎರಡು ಬೈಕ್ ಗಳ ನಡುವೆ ಅಪಘಾತ: ಓರ್ವ ಸಾವು

314

ಪ್ರಜಾಸ್ತ್ರ ಸುದ್ದಿ

ಅಳ್ನಾವರ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಅಳ್ನಾವರ-ಧಾರವಾಡ ರಸ್ತೆಯ ಕಡಬಗಟ್ಟಿ ಗ್ರಾಮದ ಹತ್ತಿರ ಸೋಮವಾರ ಸಂಜೆ ಸುಮಾರು 7.30ರ ಸಮಯದಲ್ಲಿ ನಡೆದಿದೆ. ಇಶರತ್ ಅಸಲಂ ಸೊಡೆವಾಲೆ(29) ಮೃತ ದುರ್ದೈವಿ. ಇನ್ನು ಅಸಲಂ ಎಂಬುವರಿಗೆ ಗಂಭೀರ ಗಾಯಗಳಾಗಿವೆ.

ಈ ಘಟನೆ ಸಂಬಂದ ಅಳ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರಶುರಾಮ ಸಂಬಾಜಿ ಎಂಬಾತನ ವಿರುದ್ಧ ಅಸಲಂ ಸೊಡೆವಾಲೆ ದೂರು ದಾಖಲಿಸಿದ್ದಾರೆ. ಈತ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಪರಶುರಾಮ್ ನ ಬೈಕ್ ಹಿಂದೆ ಕುಳಿತಿದ್ದ ಸಬಸ್ಟಿನ್ ಅಂತೋನಿ ಫರ್ನಾಂಡಿಸ್ ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!