ಸಿಂದಗಿ ಜನರೆ ಎಚ್ಚರ..!

429

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಪ್ರತಿಯೊಬ್ಬರು ಇದನ್ನು ಓದಬೇಕಾದ ಸುದ್ದಿ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ಮತ್ತೊಂದು ಆಘಾತಕಾರಿಯಾದ ಸುದ್ದಿ ಇದು. ಅದೇನು ಅಂದರೆ, ಮನೆ ಮುಂದೆ ನಿಲ್ಲಿಸಿರುವ ಬೈಕ್ ಗಳಲ್ಲಿನ ಪೆಟ್ರೋಲ್ ರಾತ್ರೋರಾತ್ರಿ ಕಳ್ಳತನ ಮಾಡಲಾಗುತ್ತಿದೆ. ಪೆಟ್ರೋಲ್ ಕಳ್ಳರು ಬೈಕ್ ಗಳ ವೈಯರ್ ಕಟ್ ಮಾಡಿ ಎಣ್ಣೆಯನ್ನು ಕದಿಯುತ್ತಿದ್ದಾರೆ.

ಪಟ್ಟಣದ ಹಲವು ಬಡಾವಣೆಗಳಲ್ಲಿ ಕಳೆದ ಕೆಲ ದಿನಗಳಿಂದ ಪೆಟ್ರೋಲ್ ಕಳ್ಳತನ ನಡೆದಿವೆ. ಪೆಟ್ರೋಲ್ ಬೆಲೆ 110ರ ಗಡಿ ದಾಟಿದೆ. ಇದರ ಪರಿಣಾಮ ಕಳ್ಳರ ಕಣ್ಣು
ಪೆಟ್ರೋಲ್ ಮೇಲೆ ಬಿದ್ದಿದ್ದು, ರಾತ್ರೋರಾತ್ರಿ ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿದೆ. ಬೆಳಗ್ಗೆ ಬೈಕ್ ಸ್ಟಾರ್ಟ್ ಮಾಡಲು ಹೋದಾಗಲೇ ಸಾರ್ವಜನಿಕರಿಗೆ ತಿಳಿಯುತ್ತಿದೆ ಪೆಟ್ರೋಲ್ ಕಳ್ಳತನ ಮಾಡಲಾಗಿದೆ ಅನ್ನೋದು.

ಬಡವರು, ಮಧ್ಯಮ ವರ್ಗದವರು ಬೆವರು ಸುರಿಸಿ ದುಡಿದು ಹೇಗೋ ಜೀವನ ಮಾಡುತ್ತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಒಂದಿಷ್ಟು ಹಣ ಕೂಡಿಸಿ ಇಡುವುದೇ ದುಸ್ಥರವಾಗಿದೆ. ಇದರ ನಡುವೆ ಕಳ್ಳರು ಪೆಟ್ರೋಲ್ ಗೆ ಕನ್ನ ಹಾಕುತ್ತಿರುವುದು ನೋಡಿದರೆ, ಇದರಲ್ಲಿ ಸ್ಥಳೀಯರು ಕೈವಾಡ ಇದೆಯಾ, ಹೊರಗಿನಿಂದ ಬಂದು ಯಾರಾದರೂ ಈ ರೀತಿ ಮಾಡುತ್ತಿದ್ದಾರ ಅನ್ನೋ ಪ್ರಶ್ನೆ ಮೂಡಿದ್ದು, ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಅಂತಿದ್ದಾರೆ ಸಾರ್ವಜನಿಕರು.


TAG


Leave a Reply

Your email address will not be published. Required fields are marked *

error: Content is protected !!