ಖಾಸಗಿ ವಿಡಿಯೋ, ಪ್ರೇಮಿಗಳಿಗೆ ಬ್ಲ್ಯಾಕ್ ಮೇಲ್: ಇಬ್ಬರ ಬಂಧನ

282

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಖಾಸಗಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಹೇಳಿ ಪ್ರೇಮಿಗಳಿಗೆ ಬ್ಲ್ಯಾಕ್ ಮಾಡಿದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಕಿರಣ್ ಹಾಗೂ ನಯನಾ ಬಂಧಿತ ಆರೋಪಿಗಳು.

ಕೆಂಗೇರಿ ಮುಖ್ಯರಸ್ತೆಯ ಕೆಂಚನಾಪುರದಲ್ಲಿ ಹೋಟೆಲ್ ನಡೆಸುತ್ತಿದ್ದರು. ನಯನಾ ಯುವತಿಯ ಸಂಬಂಧಿಯಂತೆ. ಹೀಗಾಗಿ ಆಗಾಗ ಸಂತ್ರಸ್ತರು ಹೋಟೆಲ್ ಗೆ ಬರುತ್ತಿದ್ದರು. ಅವರಿಗೆ ರೂಮಿನಲ್ಲಿ ಇರಲು ಪ್ರಚೋದನೆ ನೀಡುತ್ತಿದ್ದರಂತೆ. ಅವರಿಬ್ಬರ ವಿಡಿಯೋ ಇಟ್ಟುಕೊಂಡು 1 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಯುವತಿ ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಿರಣ್ ಹಾಗೂ ನಯನಾಳನ್ನು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!