ಬೈಕ್ ಸವಾರನಿಗೆ ಥಳಿತ, ಬಿಎಂಟಿಸಿ ಬಸ್ ಚಾಲಕ ಅಮಾನತು

213

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೈಕ್ ಸವಾರನೊಬ್ಬನಿಗೆ ಬಿಎಂಟಿಸಿ ಬಸ್ ಚಾಲಕ ಹಿಗ್ಗಾಮುಗ್ಗಿ ಥಳಿಸಿದ ಘಟನೆ ಸಂಬಂಧ, ಚಾಲಕನನ್ನು ಅಮಾನತು ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಈಗ ಚಾಲಕನನ್ನು ಅಮಾನತುಗೊಳಿಸಲಾಗಿದೆ.

ಯಲಹಂಕ ಮಾರ್ಗವಾಗಿ ಹೋಗುತ್ತಿದ್ದ ಬಸ್ ಗೆ ಜಾಗ ಬಿಡದೆ ಬೈಕ್ ಸವಾರ ತೊಂದರೆ ಕೊಡುತ್ತಿದ್ದನಂತೆ. ನಂತರ ಬೈಕ್ ನಿಲ್ಲಿಸಿ ಬಸ್ಸಿನೊಳಗೆ ಬಂದು ಚಾಲಕನಿಗೆ ಬಾಯಿಗೆ ಬಂದಂತೆ ಬೈದು, ಮಧ್ಯದ ಬೆರಳು ತೋರಿಸಿದ್ದಾನೆ. ಇದರಿಂದ ಸಿಟ್ಟಾದ ಬಸ್ ಚಾಲಕ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


TAG


Leave a Reply

Your email address will not be published. Required fields are marked *

error: Content is protected !!