ಗ್ರಂಥಾಲಯಕ್ಕೆ ಕೃತಿಗಳ ಆಹ್ವಾನ

620

ಕಲಬುರಗಿ: ಇಲ್ಲಿನ ಜಿಲ್ಲಾ ಕೇಂದ್ರ ಸಾರ್ವಜನಿಕ ಗ್ರಂಥಾಲಯದಿಂದ, ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ಪುಸ್ತಕಗಳನ್ನ ಆಹ್ವಾನಿಸಲಾಗಿದೆ. 2019ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಅಂದ್ರೆ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ ಪ್ರಕಟಗೊಂಡ ಕೃತಿಗಳನ್ನ ಆಹ್ವಾನಿಸಲಾಗಿದೆ.

ಸಾಹಿತ್ಯ, ಲಲಿತಕಲೆ, ವಿಜ್ಞಾನ, ವೈದ್ಯಕೀಯ, ತಾಂತ್ರಿಕ, ಮಾನವೀಯ, ಸ್ಪರ್ಧಾತ್ಮಕ, ವಿಮರ್ಶಕ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರಗಳ ಕೃತಿಗಳನ್ನ ಕಳಿಸಬಹುದಾಗಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಯಾವುದೇ ಭಾಷೆಯಲ್ಲಿ ಮುದ್ರಣಗೊಂಡಿದ್ರೂ ಲೇಖಕರು, ಪ್ರಕಾಶಕರು, ವಿತರಕ ಸಂಸ್ಥೆಯವರು ಆಯ್ಕೆ ಸಮಿತಿಗೆ ಕಳಿಸಬಹುದೆಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.

ಪುಸ್ತಕ ಕಳಿಸಬೇಕಾದ ವಿಳಾಸ:

ಗ್ರಂಥ ಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಪಾರ್ಕ್, ಬೆಂಗಳೂರು ಇಲ್ಲಿಗೆ ಕಳಿಸಬೇಕು. ಜನವರಿ 30, 2020 ಕೊನೆಯ ದಿನವಾಗಿದೆ. ಅರ್ಜಿಯೊಂದಿಗೆ ಒಂದು ಕೃತಿ ಹಾಗೂ ಡಿಜಿಟಲ್ ಓದುಗರಿಗಾಗಿ ನೀಡುವುದಾದ್ರೆ ಅನುಮತಿ ಪತ್ರದೊಂದಿಗೆ ಸಾಫ್ಟ್ ಕಾಪಿಯನ್ನ ಸಿಡಿಯಲ್ಲಿ ರೈಟ್ ಮಾಡಿ ಸಲ್ಲಿಸಬೇಕೆಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ www.Karnatakapubliclibrary.gov.in ವೈಬ್ ಸೈಟ್ ನೋಡಬಹುದು. ಇದರ ಜೊತೆಗೆ ಕಲಬುರಗಿಯ ಮಿನಿ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕಚೇರಿಯನ್ನ ಸಂಪರ್ಕಿಸಬಹುದು. ಕಚೇರಿ ದೂರವಾಣಿ ಸಂಖೆ- 08472-221069




Leave a Reply

Your email address will not be published. Required fields are marked *

error: Content is protected !!