ಬೈಕ್ ಗೆ ಕಾರು ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

238

ಪ್ರಜಾಸ್ತ್ರ ಸುದ್ದಿ

ಇಂಡಿ: ಬೈಕ್ ಗೆ ಕಾರೊಂದು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಾದ ಕೆ.ಡಿ ಗ್ರಾಮದ ಹತ್ತಿರ ನಡೆದಿದೆ. ಲಿಂಗದಳ್ಳಿ ಗ್ರಾಮದ ಅಮಸಿದ್ದ ಹೂಗಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಗೆ ಕಾರು ಡಿಕ್ಕಿಯಾದ ಬಳಿಕ ಕಾರಿನ ನಂಬರ್ ಪ್ಲೇಟ್ ಕಳಚಿ ಬಿದ್ದಿದೆ. ಹೀಗಿದ್ದರೂ ಕಾರು ನಿಲ್ಲಸದೆ ಚಾಲಕ ಪರಾರಿಯಾಗಿದ್ದಾನೆ. ಇಂಡಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.




Leave a Reply

Your email address will not be published. Required fields are marked *

error: Content is protected !!