ಟ್ರೆಂಡ್ ಆಗ್ತಿರುವ ‘ಕ್ಲಬ್ ಹೌಸ್’ಗೆ ಮತ್ತಷ್ಟು ಸೌಲಭ್ಯ!

246

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ತಂತ್ರಜ್ಞಾನ ಬೆಳದಂತೆ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿವೆ. ಒಂದನ್ನೊಂದು ಮೀರಿಸುವ ಹೊಸ ಹೊಸ ಅಪ್ಲಿಕೇಷನ್ ಗಳು ಜನರನ್ನ ಸೆಳೆಯುತ್ತಿವೆ. ಸಧ್ಯ ಕ್ಲಬ್ ಹೌಸ್ ಅನ್ನೋ ಅಪ್ಲಿಕೇಷನ್ ಸಾಕಷ್ಟು ಟ್ರೆಂಡ್ ಆಗಿದೆ.

ಈ ಆ್ಯಪ್ ನಲ್ಲಿ ಆಡಿಯೋ ಮೂಲಕ ಸಂವಹನ ನಡೆಸಬಹುದಾಗಿದೆ. ಇದೊಂದು ಇನ್ವೈಟ್ ಓನ್ಲಿ ಅಪ್ಲಿಕೇಷನ್ ಆಗಿದ್ದು, ಇದರ ಸದಸ್ಯರಾದ್ಮೇಲೆ ಆಡಿಯೋ ಚಾಟ್ ಮೂಲಕ ರೂಂನ ಸದಸ್ಯರ ಜೊತೆಗೆ ಮಾತ್ನಾಡಬಹುದು. ಇದೀಗ ಇದರಲ್ಲಿ ಟೆಕ್ಸ್ಟ್ ಮೆಸೇಜ್ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗ್ತಿದೆ.

ಟೆಕ್ಸ್ಟ್ ಮೆಸೇಜ್ ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಇದರ ಸ್ಕ್ರೀನ್ ಶಾಟ್ ಓಡಾಟ ನಡೆಸಿದೆ. ಆದ್ರೆ, ಇದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಇನ್ನು ಈ ಅಪ್ಲಿಕೇಷನ್ ಇದುವರೆಗೂ 10 ಲಕ್ಷ ಜನ ಡೌನೋಲ್ಡ್ ಮಾಡಿಕೊಂಡಿದ್ದಾರಂತೆ.




Leave a Reply

Your email address will not be published. Required fields are marked *

error: Content is protected !!