ರಾಜ್ಯದಲ್ಲಿ 161 ಜನರಲ್ಲಿ ಸೋಂಕು 164 ಜನರು ಗುಣಮುಖ

358

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ ಇಂದು 161 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 5,921ಕ್ಕೆ ಏರಿಕೆಯಾಗಿದೆ. ಇನ್ನು ಇಬ್ಬರು ಸೋಂಕಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

ಇದರ ಜೊತೆಗೆ ಇಂದು 164 ಜನರು ಗುಣಮುಖರಾಗಿದ್ದು, ಇದರೊಂದಿಗೆ ಇದುವರೆಗೆ 2,605 ಜನರು ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲಾವಾರು ಸೋಂಕಿತರ ಲಿಸ್ಟ್ ಇಲ್ಲಿದೆ.

ಯಾದಗಿರಿ 61, ಬೆಂಗಳೂರು ನಗರ 29, ದಕ್ಷಿಣ ಕನ್ನಡ 23, ಕಲಬುರಗಿ 10, ಬೀದರ 9, ದಾವಣಗೆರೆ 8, ಕೊಪ್ಪಳ 6, ಶಿವಮೊಗ್ಗ 4, ವಿಜಯಪುರ 2, ಚಿಕ್ಕಬಳ್ಳಾಪುರ 2, ಮೈಸೂರು 2, ಧಾರವಾಡ 2, ಬಾಗಲಕೋಟೆ 1, ತುಮಕೂರು 1, ಚಾಮರಾಜನಗರ 1 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಅತೀ ಹೆಚ್ಚು ಸೋಂಕಿತ ಕೇಸ್ ಗಳಿರುವ ಜಿಲ್ಲೆಗಳು ಅಂದ್ರೆ,

ಉಡುಪಿ 947, ಕಲಬುರಗಿ 769, ಯಾದಗಿರಿ 642, ಬೆಂಗಳೂರು 522, ರಾಯಚೂರು 359, ಮಂಡ್ಯ 334 ಹಾಗೂ ಬೆಳಗಾವಿಯಲ್ಲಿ 301 ಜನರಲ್ಲಿ ಇದುವರೆಗೂ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!