ಕರೋನಾಗೆ ಸ್ಪೇನ್ ರಾಜಕುಮಾರಿ ಬಲಿ

410

ವಿಶ್ವವ್ಯಾಪಿಯಾಗಿರುವ ಕರೋನಾ ಸ್ಪೇನ್ ದೇಶದ ರಾಜಕುಮಾರಿಯನ್ನ ಬಲಿ ಪಡೆದಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. 86 ವರ್ಷದ ರಾಜಕುಮಾರಿ ಮರಿಯಾ ತೆರೇಸಾ ಕರೋನಾದಿಂದಾಗಿ ಸಾವನ್ನಪ್ಪಿದ್ದು, ಈ ಬಗ್ಗೆ ಸಹೋದರ ಪ್ರಿನ್ಸ್ ಸಿಕ್ಸ್ ಟೊ ಎನ್ರಿಕ್ ಡಿ ಬೊರ್ಬನ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಮರಿಯಾ ತರೇಸಾ ಸ್ಪೇನ್ ರಾಜಕುಮಾರ ಫಿಲಿಪೆ VI ಅವರ ಸಹೋದರ ಸಂಬಂಧಿಯಾಗಿದ್ದಾರೆ. 1933ರಲ್ಲಿ ಜನಿಸಿದ್ದ ಮಾರಿಯಾ ಪ್ಯಾರಿಸ್ ನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ರು. ಹಲವಾರು ಹೋರಾಟಗಳಲ್ಲಿ ರಾಜಕುಮಾರಿ ಭಾಗವಹಿಸಿದ್ರು. ಇವರನ್ನ ರೆಡ್ ಪ್ರಿನ್ಸ್ ಎಂದು ಕರೆಯಲಾಗ್ತಿತ್ತು. ಪ್ರಿನ್ಸ್ ಮರಿಯಾ ತೆರೇಸಾಗೆ ಕರೋನಾ ಪತ್ತೆಯಾಗಿತ್ತು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!