ಸ್ಫೋಟಕ ಮಾಹಿತಿ: ಭಾರತದಲ್ಲಿ ಶೇ 80ರಷ್ಟು ಸೋಂಕಿತರಲ್ಲಿ ಸೋಂಕು ಲಕ್ಷಣಗಳೇ ಇಲ್ಲ

630

ನವದೆಹಲಿ: ಕೇಂದ್ರ ಆರೋಗ್ಯ ಇಲಾಖೆ ಇದೀಗ ಸ್ಫೋಟಕ ಮಾಹಿತಿಯೊಂದ ಬಹಿರಂಗಗೊಳಿಸಿದೆ. ಅದರಂತೆ ಭಾರತದಲ್ಲಿ ಕಂಡು ಬಂದ ಕರೋನಾ ಸೋಂಕು ಪ್ರಮಾಣದಲ್ಲಿ ಶೇಕಡ 80ರಷ್ಟು ಸೋಂಕಿತರಲ್ಲಿ ರೋಗದ ಲಕ್ಷಣಗಳೇ ಇರ್ಲಿಲ್ಲವೆಂದು ಹೇಳಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ ಮಾಹಿತಿ ನೀಡಿದ್ದಾರೆ.

ಇನ್ನು ಕರ್ನಾಟಕದಲ್ಲಿ ಶೇಕಡ 60ರಷ್ಟು ಸೋಂಕಿತರಲ್ಲಿ ರೋಗದ ಗುಣಲಕ್ಷಣಗಳೇ ಇರ್ಲಿಲ್ಲವೆಂದು ತಿಳಿಸಿದ್ದಾರೆ. ಏಪ್ರಿಲ್ 16 ಅಂಕಿಸಂಖ್ಯೆಗಳ ಆಧಾರದಲ್ಲಿ 315 ಕರೋನಾ ಸೋಂಕಿತರ ಪೈಕಿ ಶೇ 60ರಷ್ಟು ಮಂದಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಲ್ಲವಂತೆ. ಹೀಗಾಗಿ ಸೋಂಕು ಪತ್ತೆ ಹಚ್ಚಲು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಲವ ಅಗರ್ವಾಲ್, ಜಂಟಿ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಇಲಾಖೆ

ರಾಜ್ಯದ 315 ಸೋಂಕಿತರಲ್ಲಿ 129 ಮಂದಿ ರೋಗದ ಲಕ್ಷಣಗಳು ಕಂಡು ಬಂದ್ರೆ, 186 ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಇದ್ರಿಂದಾಗಿ ಪ್ರಾಥಮಿಕ ಹಂತದಲ್ಲಿ ಸೋಂಕು ಕಂಟ್ರೋಲ್ ಮಾಡಲು ಸಾಧ್ಯವಾಗಿಲ್ಲವಂತೆ.

ಶೇಕಡ 80ರಷ್ಟು ಸೋಂಕಿನ ಲಕ್ಷಣ ಕಂಡು ಬಂದಿಲ್ಲ. ಶೇಕಡ 15ರಷ್ಟು ಮಧ್ಯಮ ಪ್ರಮಾಣದ ಸೋಂಕು ಕಾಣಿಸಿಕೊಂಡಿದೆ. ಶೇಕಡ 05ರಷ್ಟು ರೋಗಿಗಳಲ್ಲಿ ಗಂಭೀರ ಪ್ರಮಾಣದ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿದು ಬಂದಿದೆ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ.




Leave a Reply

Your email address will not be published. Required fields are marked *

error: Content is protected !!