ಮಹಾರಾಷ್ಟ್ರದ ಬಳಿಕ ಇದೀಗ ಚೆನ್ನೈನಲ್ಲಿ 27 ಪತ್ರಕರ್ತರಿಗೆ ಕರೋನಾ

449

ಚೆನ್ನೈ: ಮಹಾರಾಷ್ಟ್ರದ ಮುಂಬೈನಲ್ಲಿ 53 ಜನ ಪತ್ರಕರ್ತರಿಗೆ ಕರೋನಾ ಸೋಂಕು ದೃಢಪಟ್ಟಿದ ಬೆನ್ನಲ್ಲೇ ಇದೀಗ ಚೆನ್ನೈನಲ್ಲಿ 27 ಜನರಲ್ಲಿ ಕರೋನಾ ಕಾಣಿಸಿಕೊಂಡಿರುವುದು ಪಕ್ಕಾ ಆಗಿದೆ.

ಸುದ್ದಿ ವಾಹಿನಿಯೊಂದರ ಪತ್ರಕರ್ತರೊಬ್ಬರಿಗೆ ಕರೋನಾ ಸೋಂಕು ಇರುವುದು ಭಾನುವಾರ ದೃಢವಾಗಿತ್ತು. ಹೀಗಾಗಿ ಇವರ ಸಂಪರ್ಕದಲ್ಲಿದ್ದ 94 ಮಂದಿಯನ್ನ ಮಹಾನಗರ ಪಾಲಿಕೆ ರಕ್ತದ ಮಾದರಿಯ ಪರೀಕ್ಷೆ ನಡೆಸಿದೆ. ಅದರಲ್ಲಿ ಇದೀಗ 27 ಜನ ಪತ್ರಕರ್ತರಿಗೆ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದವರ ವರದಿ ಬರಬೇಕು ಎಂದು ತಿಳಿಸಲಾಗಿದೆ.

ಮೊದಲ ಸೋಂಕು ಕಾಣಿಸಿಕೊಂಡ ಪತ್ರಕರ್ತ ರೊಯಪುರಂನ ಪೊಲೀಸ್ ಕ್ವಾಟರ್ಸ್ ನಿವಾಸಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!