ಶಾಲೆಗಳಿಗೆ ಹೊಸ ಮಾರ್ಗಸೂಚಿ.. ಶಿಕ್ಷಣ ಸಂಸ್ಥೆಗಳು ಮತ್ತೆ ಬಂದ್?

516

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಅದರಲ್ಲೂ ಶಾಲಾ, ಕಾಲೇಜುಗಳಲ್ಲಿ ಕರೋನಾ ಹಾವಳಿ ಹೆಚ್ಚಿಗೆ ಕಂಡು ಬರುತ್ತಿದ್ದು, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಡಿಸೆಂಬರ್ 9ರಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಈಗಾಗ್ಲೇ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಶಾಲಾ, ಕಾಲೇಜುಗಳನ್ನು ಕಟ್ಟುನಿಟ್ಟಾಗಿ ನಡೆಸಬೇಕೆಂದು ಸೂಚಿಸಿದೆ. ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಆನ್ಲೈನ್ ಕ್ಲಾಸ್ ಕೇಳಬಹುದು. ಬೆಳಗ್ಗೆ 10 ಗಂಟೆಯಿಂದ 1.30ರ ತನಕ ಮಾತ್ರ ಶಾಲೆ. ಶೇಕಡ 50ರಷ್ಟು ಹಾಜರಾತಿಯಲ್ಲಿ ಶಾಲೆ ನಡೆಸಬೇಕು. ಒಂದು ತರಗತಿಯಲ್ಲಿ 15-20 ವಿದ್ಯಾರ್ಥಿಗಳು ಇರಬೇಕು. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಶಾಲೆ. ಶನಿವಾರ ಹಾಗೂ ಭಾನುವಾರ ಶಾಲೆ ಸ್ವಚ್ಛಗೊಳಿಸಬೇಕು ಎಂದು ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

ಇದರ ಜೊತೆಗೆ ಶಿಕ್ಷಣ ಸಚಿವರು ಡಿಸೆಂಬರ್ 9ರಂದು ಸಭೆ ಕರೆದಿದ್ದು, ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅನ್ನೋ ಕುತೂಹಲ ಮೂಡಿದೆ. ಈಗಾಗ್ಲೇ ಮತ್ತೆ ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗುತ್ತೆ ಅನ್ನೋ ಊಹಾಪೋಹ ಎದ್ದಿದೆ. ಇದರ ಬಗ್ಗೆ ಸರ್ಕಾರ ಏನು ಹೇಳುತ್ತೆ ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!