ವಿಜಯಪುರದಲ್ಲಿಂದು ದೃಢಪಟ್ಟ ಐವರು ಸೋಂಕಿತರಿಗೆ ಮುಂಬೈ ನಂಟು

380

ವಿಜಯಪುರ: ಇವತ್ತಿನ ಕರೋನಾ ಹೆಲ್ತ್ ಬುಲೆಟಿನ್ ನಲ್ಲಿ 5 ಜನಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಐವರು ಮಹಾರಾಷ್ಟ್ರದ ಮುಂಬೈನಿಂದ ಆಗಮಿಸದವರಾಗಿದ್ದಾರೆ.

45 ವರ್ಷದ ವ್ಯಕ್ತಿ, 22, 20 ವರ್ಷದ ಇಬ್ಬರು ಯುವಕರು, 19 ವರ್ಷದ ಗರ್ಭಿಣಿ ಹಾಗೂ 10 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಮೇ 13ರಂದು ಖಾಸಗಿ ವಾಹನದಲ್ಲಿ 7 ಜನರು ಮುಂಬೈನಿಂದ ಬಂದಿದ್ದಾರೆ. ಇವರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗಿತ್ತು. ಈಗಾಗ್ಲೇ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಇದೀಗ ಆಕೆಗೆ ಸೋಂಕು ಇರುವುದು ಪತ್ತೆಯಾಗಿದೆ. ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ತಿಳಿದು ಬಂದಿದೆ.

ಗುಮ್ಮಟನಗರಿಯಲ್ಲಿ ಇದುವರೆಗೂ 59 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 37 ಜನ ಗುಣಮುಖರಾಗಿದ್ದಾರೆ. 3 ಜನ ಸಾವನ್ನಪ್ಪಿದ್ದಾರೆ. ಇನ್ನು 19 ಜನಕ್ಕೆ ಚಿಕಿತ್ಸೆ ಮುಂದುವರೆದಿದೆ.

ಮಹಾರಾಷ್ಟ್ರದ ಚಿಪ್ಲೋನ್ ನಿಂದ ಶ್ರಮಿಕ್ ರೈಲಿನ ಮೂಲಕ 820 ವಲಸೆ ಕಾರ್ಮಿಕರು ಬಂದಿದ್ದಾರೆ. ಇಂದು ನಗರಕ್ಕೆ ಕಲಬುರಗಿಯ 120 ಹಾಗೂ ವಿವಿಧ ಜಿಲ್ಲೆಗಳ 50 ಕಾರ್ಮಿಕರು ಬಂದಿದ್ದು, ಅವರನ್ನ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 12, 500 ಜನ ವಿವಿಧ ರಾಜ್ಯಗಳಿಂದ ಬಂದಿದ್ದಾರೆ. ಇವರನ್ನೆಲ್ಲ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!