ವಿಜಯಪುರದಲ್ಲಿ ಹೆಚ್ಚುತ್ತಿರುವ ಸೋಂಕು: ವೃದ್ಧರು ಹೊರ ಬಂದ್ರೆ ಏನ್ ಶಿಕ್ಷೆ ಗೊತ್ತಾ?

394

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಇದುವರೆಗೂ 976 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 654 ಜನ ಡಿಸ್ಚಾರ್ಜ್ ಆದ್ರೆ, 303 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ದೇ, 19 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಇದೀಗ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮನೆಯಿಂದ ಆಚೆ ಬಂದ್ರೆ, ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ವೈದ್ಯಕೀಯ, ತುರ್ತು ಸೇವೆ ಸೇರಿದಂತೆ ಅತೀ ಅಗತ್ಯವಾದ ಕೆಲಸಗಳಿಗೆ ಮಾತ್ರ ಹೊರಗೆ ಬರಬೇಕು. ಇದನ್ನ ಹೊರತು ಪಡಿಸಿ, ಸುಖಾಸುಮ್ಮನೆ ಹೊರಗೆ ಬಂದ್ರೆ ಮೊದಲು ಎಚ್ಚರಿಕೆ. ನಂತರ ಸಂಸ್ಥಾಕ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಬಂದಿರುವ ಸೋಂಕಿನಲ್ಲಿ ಶೇಕಡ 99ರಷ್ಟು 55 ವರ್ಷ ಮೇಲ್ಪಟ್ಟವರಿದ್ದಾರೆ. ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ದೀರ್ಘ ಕಾಯಿಲೆ, ಉಸಿರಾಟದ ತೊಂದ್ರೆಯಿರುವ ಹಿರಿಯರು ಸೋಂಕಿಗೆ ತುತ್ತಾಗ್ತಿದ್ದಾರೆ. ಹೀಗಾಗಿ ಅನಗತ್ಯವಾಗಿ ಓಡಾಡುವ ಹಿರಿಯ ನಾಗರೀಕರನ್ನ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಕುಟುಂಬಸ್ಥರು ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!