ಯುವ ನಟಿ ಸುಹಾನಿ ಭಟ್ನಾಗರ್ ನಿಧನ

184

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ನಟನೆಯ ಬ್ಲಾಕ್ ಬ್ಲಸ್ಟರ್ ದಂಗಲ್ ಚಿತ್ರದ ಖ್ಯಾತಿಯ ನಟಿ ಸುಹಾನಿ ಭಟ್ನಾಗರ್ ನಿಧನರಾಗಿದ್ದಾರೆ. ಕೇವಲ 19 ವರ್ಷದ ಯುವ ನಟಿ ನಿಧನಕ್ಕೆ ಚಿತ್ರರಂಗಕ್ಕೆ ಶಾಕ್ ನೀಡಿದೆ.

ಕಾಲಿನ ಸಮಸ್ಯೆಯ ಬಳಿಕ ವೈದ್ಯಕೀಯ ತೊಂದರೆಗಳನ್ನು ಅನುಭವಿಸಿದೆ ಸುಹಾನಿ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ನಾವು ತೀವ್ರ ದುಃಖದ ಸಂತಾಪಗಳನ್ನು ತಿಳಿಸುತ್ತೇವೆ. ಆಕೆಯ ತಾಯಿ ಪೂಜಾಜಿ ಹಾಗೂ ಇಡೀ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪಗಳನ್ನು ತಿಳಿಸುತ್ತೇವೆ. ತುಂಬಾ ಪ್ರತಿಭಾವಂತ ಹುಡುಗಿ ಸುಹಾನಿ ಇಲ್ಲದೆ ದಂಗಲ್ ಅಪೂರ್ಣ. ನೀನು ನಮ್ಮ ಹೃದಯದಲ್ಲಿ ಯಾವಾಗಲೂ ಸ್ಟಾರ್ ಎಂದು ಬರೆದು ಆಮಿರ್ ಖಾನ್ ಪ್ರೊಡಕ್ಷನ್ ನಟಿಯ ಸಾವಿನ ಕುರಿತು ದೃಢಪಡಿಸಿದೆ.

ಭಾರತದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಕುಸ್ತಿಪಟುಗಳಾದ ಗೀತಾ, ಬಬಿತಾ, ಪ್ರಿಯಾಂಕಾ, ರಿತು, ವಿನಿಶಾ ಹಾಗೂ ಸಂಗೀತ ಅವರ ಬದುಕು ಆಧಾರತ ದಂಗಲ್ ಅನ್ನೋ ಸಿನಿಮಾ 2016ರಲ್ಲಿ ತೆರೆಗೆ ಬಂದಿತು. ಆಮಿರ್ ಖಾನ್ ನಟನೆಯ ಚಿತ್ರದಲ್ಲಿ ಸುಹಾನಿ ಬಬಿತಾ ಪಾತ್ರ ಮಾಡಿದ್ದಳು. ಸಾಕ್ಷಿ ತನ್ವಿರ್, ಜೈರಾ ವಾಸೀಂ ಉಳಿದ ಪಾತ್ರ ಮಾಡಿದ್ದರು.




Leave a Reply

Your email address will not be published. Required fields are marked *

error: Content is protected !!