ಅನರ್ಹರ ಅರ್ಜಿ ವಿಚಾರಣೆ ಅಂತ್ಯ: ಮತ್ತಷ್ಟು ಟೆನ್ಷನ್

380

ನವದೆಹಲಿ: ಅನರ್ಹ ಶಾಸಕರ ಅರ್ಜಿ ವಿಚಾರಣೆಯ ಎರಡೂ ಕಡೆಯ ವಾದ ಕಂಪ್ಲೀಟ್ ಆಗಿದೆ. ತೀರ್ಪನ್ನ ಸುಪ್ರೀಂ ಕೋರ್ಟ್ ಕಾಯ್ದಿರಿಸಿದ್ದು, ನವೆಂಬರ್ ಮೊದಲ ವಾರದಲ್ಲಿ ಹೊರ ಬೀಳುವ ಸಾಧ್ಯತೆಯಿದೆ.

ಸ್ಪೀಕರ್ ತೀರ್ಪಿನ ಪರವಾಗಿ ಹಿರಿಯ ವಕೀಲ ಕಪಿಲ ಸಿಬಲ್ ವಾದ ಮಂಡಿಸಿದ್ರು. ಕಾಂಗ್ರೆಸ್ ಪರ ಹಾಗೂ ಅನರ್ಹ ಶಾಸಕರ ಪರವಾದ ವಕೀಲರು ಹಾಗೂ ಶ್ರೀಮಂತ ಪಾಟೀಲ ಮತ್ತು ಡಾ.ಸುಧಾಕರ ಪರವಾದ ವಕೀಲರು ಸಹ ವಾದ ಮಂಡಿಸಿದ್ರು. ಇದೆಲ್ಲವನ್ನ ಆಲಿಸಿರುವ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿದೆ.

ಅನರ್ಹ ಶಾಸಕರು ಇದೀಗ ತೀರ್ಪು ಏನು ಬರಲಿದೆ ಅನ್ನೋ ಟೆನ್ಷನ್ ನಲ್ಲಿದ್ದಾರೆ. ಹಿಂದಿನ ಸ್ಪೀಕರ್ ರಮೇಶ ಕುಮಾರ ಅವರ ನಿರ್ಧಾರ ಸರಿಯಾಗಿದೆ ಅಂತಾ ಹೇಳುತ್ತಾ, ರಾಜೀನಾಮೆ ಅಂಗೀಕಾರ ಮಾಡಿ ಅಂತಾ ಹೇಳುತ್ತಾ? ಅನ್ನೋ ಕುತೂಹಲವಿದೆ. ಒಂದು ವೇಳೆ ಅನರ್ಹರ ಪರವಾಗಿ ತೀರ್ಪು ಬಂದ್ರೆ ಬಿಜೆಪಿ ಟಿಕೆಟ್ ಫಿಕ್ಸ್, ಕಮಲ ಪಾಳೆಯದಲ್ಲಿ ಒಂದಿಷ್ಟು ಗುದ್ದಾಟ ಶುರು. ಅನರ್ಹ ಶಾಸಕರ ವಿರುದ್ಧವಾಗಿ ತೀರ್ಪು ಬಂದ್ರೆ, ಬಿಜೆಪಿಗೆ ಲಾಭದ ಜೊತೆಗೆ ಮತ್ತೊಂದು ಟೆನ್ಷನ್.

ಇತ್ತ ಕಾಂಗ್ರೆಸ್ ಸಹ ಕುತೂಹಲದಿಂದ ತೀರ್ಪನ್ನ ಎದುರು ನೋಡ್ತಿದೆ. ತಮ್ಮ ಬೆನ್ನಿಗೆ ಚೂರಿ ಹಾಕಿ ಹೋದ ನಾಯಕರುಗಳಿಗೆ ಅನರ್ಹತೆ ಶಿಕ್ಷೆಯಾಗ್ಲಿ ಅಂತಿದ್ದಾರೆ. ಅದೇನಾಗುತ್ತೋ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!