ಈ ಗಲಭೆ ಪೂರ್ವಯೋಜಿತವೇ?

287

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮೂವರು ಮೃತಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಶಾಸಕರ ಸೋದರಳಿಯ ನವೀನ ಸೇರಿ 110ಕ್ಕೂ ಅಧಿಕ ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಇಷ್ಟೆಲ್ಲ ನಡೆದಿರುವುದರ ಹಿಂದೆ ಪೂರ್ವಯೋಜಿತವಾಗಿತ್ತೆ ಅನ್ನೋ ಪ್ರಶ್ನೆ ಮೂಡಿದೆ.

ಮನೆ ಮುಂದೆ ನಿಲ್ಲಿಸಿದ್ದ ಬೈಕ್, ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಶಾಸಕ ಅಖಂಡ ಶ್ರೀನಿವಾಸ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಪಿಠೋಪಕರಣಗಳನ್ನ ದ್ವಂಸಗೊಳಿಸಲಾಗಿದೆ. ಅಲ್ದೇ, ಪರಿಸ್ಥಿತಿಯನ್ನ ಕಂಟ್ರೋಲ್ ಗೆ ತರುತ್ತಿರುವ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.

ಶಾಸಕ ಅಖಂಡ ಶ್ರೀನಿವಾಸರ ಸೋದರಳಿಯ ನವೀನ

ಈ ಪ್ರದೇಶ ಚಿಕ್ಕದಾಗಿರುವುದ್ರಿಂದ ವಾಹನ ಚಾಲನೆ ಸ್ವಲ್ಪ ನಿಧಾನ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ರಾಡ್, ದೊಡ್ಡೆ ತೆಗೆದುಕೊಂಡು ಗಾಡಿಗಳನ್ನ ಧ್ವಂಸಗೊಳಿಸಿದ್ದಾರೆ. ಪೊಲೀಸರ ಕಣ್ಣೆದುರಲ್ಲೇ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ದೇ, ಈ ಪ್ರದೇಶದ ಸುತ್ತಮುತ್ತ ಗಾಂಜಾ ಹಾವಳಿ ಹೆಚ್ಚಿಗೆ ಇದ್ದು, ಕೆಲವರು ಅದರ ಮತ್ತಿನಲ್ಲಿದ್ದು, ಮಾರಕಾಸ್ತ್ರಗಳನ್ನ ಸಹ ತಂದಿದ್ರು ಎನ್ನಲಾಗ್ತಿದೆ.

ಪೊಲೀಸ್ರು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರುತ್ತಿದ್ದಂತೆ, ಗಲಾಟೆ ಮಾಡದಂತೆ ಮನವಿ ಮಾಡಿಕೊಂಡ್ರೂ ಕೇಳದೆ ಸಿಕ್ಕಸಿಕ್ಕ ರೀತಿಯಲ್ಲಿ ದಾಳೆ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿದ್ರೆ ಇದು ಪ್ರಯೋಜಿತ ಕೃತ್ಯವೆಂದು ಹೇಳಲಾಗ್ತಿದೆ. ಹೀಗಾಗಿ ಇದರ ಹಿನ್ನೆಲೆ ಏನು ಅನ್ನೋದು ತಿಳಿಯಬೇಕಿದೆ.




Leave a Reply

Your email address will not be published. Required fields are marked *

error: Content is protected !!