ದಿ.ಧ್ರುವನಾರಾಯಣ ಪತ್ನಿ ವಿಧಿವಶ

138

ಪ್ರಜಾಸ್ತ್ರ ಸುದ್ದಿ

ಮೈಸೂರು: ಇತ್ತೀಚೆಗಷ್ಟೇ ನಿಧನರಾದ ಕಾಂಗ್ರೆಸ್ ನಾಯಕ ಧ್ರುವನಾರಾಯಣ್ ಅವರ ಪತ್ನಿ ವೀಣಾ ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಪುತ್ರ ದರ್ಶನಗೆ ಆಘಾತದ ಮೇಲೆ ಆಘಾತ ಉಂಟಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದು ಫಲಿಸದೆ ಇಂದು ನಿಧನರಾಗಿದ್ದಾರೆ.

ಕಳೆದ ಮಾರ್ಚ್ 11ರಂದು ಹೃದಯಾಘಾತದಿಂದ ಧ್ರುವನಾರಾಯಣ್ ಅವರು ನಿಧನರಾಗಿದ್ದರು. ಅದರಿಂದ ಕುಟುಂಬ, ಸಂಬಂಧಿಕರು, ಅಭಿಮಾನಿಗಳು ಹೊರ ಬರುವ ಮೊದಲೇ ಮತ್ತೊಂದು ಸಾವು ಸಂಭವಿಸಿದೆ. ಇದರಿಂದಾಗಿ ಎಲ್ಲರಿಗೂ ದೊಡ್ಡ ಶಾಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!